ಹಾರೋಹಳ್ಳಿ: ಕಾಮಗಾರಿ ಪೂರ್ಣಗೊಂಡರೂ ಬಳಕೆಗೆ ಮುಕ್ತವಾಗದ ಸಾರ್ವಜನಿಕ ಶೌಚಾಲಯ
ಗೋವಿಂದರಾಜು ವಿ.
Published : 15 ಜುಲೈ 2024, 5:01 IST
Last Updated : 15 ಜುಲೈ 2024, 5:01 IST
ಫಾಲೋ ಮಾಡಿ
Comments
ಹಾರೋಹಳ್ಳಿ ಪಟ್ಟಣದ ಮಾರುಕಟ್ಟೆ ಬಳಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ
ಯಾರೂ ಹೊರಗಿನ ಜಾಗದಲ್ಲಿ ಶೌಚಕ್ಕೆ ಬಳಸಲು ಇಷ್ಟಪಡುವುದಿಲ್ಲ. ಇದು ಅಸಹ್ಯ ಅವಮಾನಕರ ಮತ್ತು ಅನಾರೋಗ್ಯಕರ ಕೂಡ. ಆದರೆ ಅದಕ್ಕೆ ಅವಕಾಶವಿಲ್ಲದಂತೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು
– ಭಾನುಪ್ರಕಾಶ್ ಸ್ಥಳೀಯ ನಿವಾಸಿ ಹಾರೋಹಳ್ಳಿ
ಶೌಚಾಲಯಗಳನ್ನು ನಿರ್ಮಿಸಿಯೂ ಇಷ್ಟು ಯಾಕೆ ಬಳಕೆಗೆ ಬಿಟ್ಟಿಲ್ಲ ಎಂಬುದಕ್ಕೆ ಪಟ್ಟಣ ಪಂಚಾಯಿತಿಯವರು ಉತ್ತರ ನೀಡಬೇಕು. ಕೂಡಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಬಳಕೆಗೆ ಮುಕ್ತವಾಗಿಸಬೇಕು
– ನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
‘ಪರಿಶೀಲಿಸಿ ಬಳಕೆಗೆ ಮುಕ್ತಗೊಳಿಸಲು ಕ್ರಮ’
‘ಪಟ್ಟಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳು ಯಾವ ಕಾರಣಕ್ಕೆ ಬಳಕೆಗೆ ಮುಕ್ತವಾಗಿಲ್ಲ ಎಂಬುದರ ಕುರಿತು ಪರಿಶೀಲನೆ ನಡೆಸಿ ಶೀಘ್ರವೇ ಅವುಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಬಳಕೆಗೆ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಹೆಚ್ಚುವರಿಯಾಗಿ ಮತ್ತೊಂದು ಶೌಚಾಲಯವನ್ನು ನಿರ್ಮಿಸಲಾಗುವುದು. ಶೌಚಾಲಯಗಳು ಹೆಚ್ಚು ಇದ್ದಷ್ಟೂ ಪಟ್ಟಣದ ಸಾರ್ವಜನಿಕ ಸ್ಥಳಗಳು ಸ್ವಚ್ಛವಾಗಿರುತ್ತವೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿಯು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.