ಚನ್ನಪಟ್ಟಣ (ರಾಮನಗರ): ‘ಕಳೆದ ಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಶೀರ್ವದಿಸಿದವರೇ ಈಗ ನನ್ನ ಬಳಿ ಬಂದು ‘ಅವನ ಮನೆ ಹಾಳಾಗ’ ಎಂದು ಬೈಯ್ಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕಸ ತೆಗೆಯಲು, ಮನೆ ಕಟ್ಟಲು ಇವರಿಗೆ ಕಮಿಷನ್ ಕೊಡಬೇಕಾದ ಸ್ಥಿತಿ ಬಂದಿದೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಮುಡಾ ಹಗರಣ ವಿರೋಧಿಸಿ ಹಮ್ಮಿಕೊಂಡ ‘ಮೈಸೂರು ಚಲೋ’ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು,‘1985ರಲ್ಲಿ ಸಾತನೂರಿನಿಂದ ಸ್ಪರ್ಧಿಸಲು ದೇವೇಗೌಡರು ನನಗೆ ಅವಕಾಶ ಕೊಟ್ಟಿದ್ದರೆ ಶಿವಕುಮಾರ್ ಬೆಳೆಯೋಕೆ ಆಗುತ್ತಿತ್ತಾ? ಇವರ ಬೆಳವಣಿಗೆಗೆ ದೇವೇಗೌಡರ ಕೃಪಾ ಕಟಾಕ್ಷವೂ ಕಾರಣ ಎಂದರು.

‘ನನ್ನ ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಇದೆ ಎಂದಿರುವ ಸಚಿವ ಜಮೀರ್, ಹಿಂದೆ ನನ್ನೊಂದಿಗೆ ಇದ್ದಾಗ ಏನೆಲ್ಲಾ ಮಾಡಿದ್ದರು. ತಾಯಿ ಹೆಸರಿನಲ್ಲಿ ಯಾವ ಪ್ರಮಾಣ ಮಾಡಿದ್ದರು ಗೊತ್ತಿದೆ. ಒಂದು ಕಾಲದಲ್ಲಿ ಏನೂ ಗತಿ ಇಲ್ಲದ ಅರಸೀಕೆರೆ ಶಾಸಕ ನಮ್ಮ ಪಕ್ಷದಲ್ಲಿಯೇ ಇದ್ದು ಬಲಿತ ಮಜ್ಜಿಗೆ ಕಳ್ಳ, ಚನ್ನಪಟ್ಟಣಕ್ಕೆ ಬಂದು ನನ್ನ ವಿರುದ್ಧ ಭಾಷಣ ಮಾಡಿ ಸವಾಲು ಹಾಕುತ್ತಾರೆ. ಇವರ ಬಂಡವಾಳವೆಲ್ಲಾ ನನಗೆ ಚನ್ನಾಗಿ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

‘ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ದುರಾಳಿತ ನಡೆಸುತ್ತಿದ್ದಾರೆ. ನಮ್ಮ ಪಾದಯಾತ್ರೆ ಉದ್ದೇಶ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದೇ ಹೊರತು, ನಾವು ಅಧಿಕಾರಕ್ಕೆ ಬರಬೇಕು ಎಂದಲ್ಲ’ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಪಾದಯಾತ್ರೆ ಕಂಡು ಭಯಪಟ್ಟಿರುವ ಸಿದ್ದರಾಮಯ್ಯ ಬೆಂಬಲಕ್ಕೆ ಕಾಂಗ್ರೆಸ್ ಕೇಂದ್ರ ನಾಯಕರು ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯದ ಪ್ರವಾಹಕ್ಕೆ ಪರಿಹಾರ ಘೋಷಿಸದ ಸಿದ್ದರಾಮಯ್ಯ ಕೇರಳದ ವಯನಾಡ್ನಲ್ಲಿ ನೂರು ಮನೆ ನಿರ್ಮಾಣ ಘೋಷಣೆ ಮಾಡಿ, ದೆಹಲಿ ನಾಯಕರನ್ನು ಸಂತುಷ್ಟಪಡಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಈಗ ಲೂಟಿರಾಮಯ್ಯ ಆಗಿದ್ದಾರೆ. ಅವರಿಗೆ ಮನೆ ಕಟ್ಟೋಕೆ 14 ನಿವೇಶನ ಬೇಕಿತ್ತಾ? ಅವರು ಬೇಗ ಸಿ.ಎಂ ಕುರ್ಚಿಯಿಂದ ಇಳಿಯಲಿ ಎಂದೇ ಶಿವಕುಮಾರ್ ಒಬ್ಬರೇ ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದಾರೆ

ಆರ್. ಅಶೋಕ ವಿರೋಧ ಪಕ್ಷದ ನಾಯಕ

ಸಿಪಿವೈ ಬೆಂಬಲಿಗರ ಮೇಲೆ ಎಚ್ಡಿಕೆ ಗರಂ

ವೇದಿಕೆಯಲ್ಲಿ ಕುಮಾರಸ್ವಾಮಿ ಅವರು ಮಾತನಾಡುವಾಗ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬೆಂಬಲಿಗರು ‘ಸಿಪಿವೈಗೆ ಚನ್ನಪಟ್ಟಣ ಟಿಕೆಟ್ ಘೋಷಿಸಿ’ ಎಂದು ಕೂಗತೊಡಗಿದರು. ಆಗ ಸಿಟ್ಟಿಗೆದ್ದ ಎಚ್ಡಿಕೆ ‘ಚನ್ನಪಟ್ಟಣದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಎರಡೂ ಪಕ್ಷದವರು ಮೊದಲು ನಿಷ್ಠೆ ತೋರಿಸಿ. ನಾವೀಗ ಟಿಕೆಟ್ ಹಂಚೋಕೆ ಬಂದಿಲ್ಲ. ಇಲ್ಲಿ ಎನ್ಡಿಎ ಉಳಿಯಬೇಕಿದ್ದು ಕಾಂಗ್ರೆಸ್ಗೆ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ನಾಯಕರು ದೆಹಲಿಯಲ್ಲಿ ಟಿಕೆಟ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕು’ ಎಂದು ಹರಿಹಾಯ್ದರು.

ವರದಿಗಾರರ ಮೇಲೆ ಹಲ್ಲೆ ಚನ್ನಪಟ್ಟಣ ಬಳಿ ಬಂದ ಪಾದಯಾತ್ರೆ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ಮೋಹನ್ ಜಿ. ಮಂಜುನಾಥ್ ಅವಿರಾಜ್ ಹಾಗೂ ಆನಂದ್ ಅವರ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರು ಹಲ್ಲೆ ನಡೆಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಪೂಂಜಾ ಸೇರಿದಂತೆ ಬೆಂಬಲಿಗರು ಕೆಟ್ಟದಾಗಿ ನಿಂದಿಸಿದರು. ಆಗ ಕೆಲ ಬೆಂಬಲಿಗರು ಹಲ್ಲೆ ನಡೆಸಿದರು. ಘಟನೆ ಕುರಿತು ಮಾಧ್ಯಮದವರು ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ ಕ್ಷಮೆ ಯಾಚಿಸಿದರು ಎಂದು ಮೂಲಗಳು ತಿಳಿಸಿವೆ.

ಸಿಪಿವೈ ಬೆಂಬಲಿಗರ ಮೇಲೆ ಎಚ್ಡಿಕೆ ಗರಂ ವೇದಿಕೆಯಲ್ಲಿ ಕುಮಾರಸ್ವಾಮಿ ಅವರು ಮಾತನಾಡುವಾಗ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬೆಂಬಲಿಗರು ‘ಸಿಪಿವೈಗೆ ಚನ್ನಪಟ್ಟಣ ಟಿಕೆಟ್ ಘೋಷಿಸಿ’ ಎಂದು ಕೂಗತೊಡಗಿದರು. ಆಗ ಸಿಟ್ಟಿಗೆದ್ದ ಎಚ್ಡಿಕೆ ‘ಚನ್ನಪಟ್ಟಣದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ. ಎರಡೂ ಪಕ್ಷದವರು ಮೊದಲು ನಿಷ್ಠೆ ತೋರಿಸಿ. ನಾವೀಗ ಟಿಕೆಟ್ ಹಂಚೋಕೆ ಬಂದಿಲ್ಲ. ಸಮಾನ ಮನಸ್ಕರ ಹೆಸರಿನಲ್ಲಿ ಬಿಜೆಪಿ ಬಾವುಟ ಇಟ್ಟುಕೊಂಡು ಸಭೆ ಕರೆಯುತ್ತೀರಾ? ಇಲ್ಲಿ ಎನ್ಡಿಎ ಉಳಿಯಬೇಕಿದ್ದು ಕಾಂಗ್ರೆಸ್ಗೆ ಕ್ಷೇತ್ರವನ್ನು ಬಿಟ್ಟು ಕೊಡುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ನಾಯಕರು ದೆಹಲಿಯಲ್ಲಿ ಟಿಕೆಟ್ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕು’ ಎಂದು ಹರಿಹಾಯ್ದರು. ಹೆಚ್ಚು ಹೊತ್ತು ಇರದ ವೇದಿಕೆ ಹತ್ತದ ಸಿಪಿವೈ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರ ಜೊತೆ ಕೆಲ ಹೊತ್ತು ಹೆಜ್ಜೆ ಹಾಕಿದ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಯೋಗೇಶ್ವರ್ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬಹಿರಂಗ ಸಮಾವೇಶದ ವೇದಿಕೆಯಲ್ಲೂ ಅವರ ಗೈರು ಎದ್ದು ಕಾಣುತ್ತಿತ್ತು. ಇತ್ತೀಚೆಗೆ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಗೈರಾಗಿರುವುದಾಗಿ ಹೇಳಿಕೊಂಡಿದ್ದ ಅವರು ಇಂದು ಕೆಲ ಹೊತ್ತು ಪ್ರತ್ಯಕ್ಷವಾಗಿ ಮಾಯವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಸಿಪಿವೈ ಬದಲು ನಿಖಿಲ್ ಕಣಕ್ಕಿಳಿಸಲು ಎಚ್ಡಿಕೆ ಒಲವು ತೋರಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಪಾದಯಾತ್ರೆ ಮಾರ್ಗದಲ್ಲಿ ಅಳವಡಿಸಿದ್ದ ಫ್ಲೆಕ್ಸ್ಗಳಲ್ಲಿ ಸಿಪಿವೈ ಭಾವಚಿತ್ರ ಕಾಣಲಿಲ್ಲ. ಎಲ್ಲೆಲ್ಲೂ ನಿಖಿಲ್ ಭಾವಚಿತ್ರವೇ ಎದ್ದು ಕಾಣುತ್ತಿತ್ತು. ಈ ಕುರಿತು ಕೇಳಿದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಪಿವೈ ‘ನೆನ್ನೆ ಹಾಕಿದ್ದ ಕಾಂಗ್ರೆಸ್ ಫ್ಲೆಕ್ಸ್ ಅನ್ನು ಇಂದು ಕಿತ್ತುಕೊಂಡು ಹೋಗಿದ್ದಾರೆ. ಇಂದು ಹಾಕಿರುವ ಬಿಜೆಪಿ–ಜೆಡಿಎಸ್ ಫ್ಲೆಕ್ಸ್ ಅನ್ನು ನಾಳೆ ಕಿತ್ತುಕೊಂಡು ಹೋಗುತ್ತಾರೆ. ಹಾಗಾಗಿ ನಾನು ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ನನ್ನ ಭಾವಚಿತ್ರ ಕ್ಷೇತ್ರದ ಜನರ ಮನಸ್ಸಿನಲ್ಲಿದೆ. ಜನಗಳ ಹೃದಯದಲ್ಲಿರುವ ನಾನು ಏನಾಗಬೇಕೇಂದು ಜನ ತೀರ್ಮಾನಿಸುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ವರದಿಗಾರರ ಮೇಲೆ ಹಲ್ಲೆ ಚನ್ನಪಟ್ಟಣ ಬಳಿ ಬಂದ ಪಾದಯಾತ್ರೆ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವರದಿಗಾರರಾದ ಮೋಹನ್ ಜಿ. ಮಂಜುನಾಥ್ ಕ್ಯಾಮೆರಾಮನ್ ಅವಿರಾಜ್ ಹಾಗೂ ಚಾಲಕ ಆನಂದ್ ಅವರ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರು ಹಲ್ಲೆ ನಡೆಸಿದರು. ವರದಿಗಾರರಿದ್ದ ಕಾರು ತಡೆದ ಬೆಂಬಲಿಗರು ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಪೂಂಜಾ ಸೇರಿದಂತೆ ಬೆಂಬಲಿಗರು ‘ಮಾಧ್ಯಮಗಳಿಂದ ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ಕೆಟ್ಟದಾಗಿ ನಿಂದಿಸಿದರು. ಆಗ ಕೆಲ ಬೆಂಬಲಿಗರು ಹಲ್ಲೆ ನಡೆಸಿದರು. ಘಟನೆ ಕುರಿತು ಮಾಧ್ಯಮದವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಗಮನಕ್ಕೆ ತಂದಾಗ ಶಾಸಕ ಮತ್ತು ಬೆಂಬಲಿಗರು ಕ್ಷಮೆ ಯಾಚಿಸಿದರು ಎಂದು ಮೂಲಗಳು ತಿಳಿಸಿವೆ.

ಕಾರ್ಯಕರ್ತೆ ಸಾವು; ಮತ್ತೊಬ್ಬರು ಅಸ್ವಸ್ಥ

ಪಾದಯಾತ್ರೆಗೆ ಬಂದಿದ್ದ ಬೆಂಗಳೂರಿನ ಬನಶಂಕರಿಯ ಜೆಡಿಎಸ್ ಕಾರ್ಯಕರ್ತೆ ಗೌರಮ್ಮ (45) ಅವರು ಕೆಂಗಲ್ ಬಳಿ ಬೆಳಿಗ್ಗೆ 11.30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟರು. ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದರು. ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಗೌರಮ್ಮ ಅವರಿಗೆ ನಮನ ಸಲ್ಲಿಸಿದರು. ಚನ್ನಪಟ್ಟಣ ಸಮೀಪದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಬೆಂಗಳೂರಿನ ಜಯನಗರ ಮಂಡಲದ ಬಿಜೆಪಿ ಉಪಾಧ್ಯಕ್ಷ ಶಂಕರ್ ಅಸ್ವಸ್ಥರಾಗಿ ಕುಸಿದರು. ಅವರನ್ನು ಚನ್ನಪಟ್ಟಣ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಧೈರ್ಯ ತುಂಬಿದರು.

ವೇದಿಕೆ ಹತ್ತದ ಸಿಪಿವೈ

ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರ ಜೊತೆ ಕೆಲ ಹೊತ್ತು ಹೆಜ್ಜೆ ಹಾಕಿದ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಯೋಗೇಶ್ವರ್ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬಹಿರಂಗ ಸಮಾವೇಶದ ವೇದಿಕೆಯಲ್ಲೂ ಅವರ ಗೈರು ಎದ್ದು ಕಾಣುತ್ತಿತ್ತು. ಇತ್ತೀಚೆಗೆ ಅವರ ತಂದೆ ನಿಧನರಾದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಗೈರಾಗಿರುವುದಾಗಿ ಹೇಳಿಕೊಂಡಿದ್ದ ಅವರು ಇಂದು ಕೆಲ ಹೊತ್ತು ಪ್ರತ್ಯಕ್ಷವಾಗಿ ಮಾಯವಾಗಿದ್ದು ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರದಲ್ಲಿ ಸಿಪಿವೈ ಬದಲು ನಿಖಿಲ್ ಕಣಕ್ಕಿಳಿಸಲು ಎಚ್ಡಿಕೆ ಒಲವು ತೋರಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಪಾದಯಾತ್ರೆ ಮಾರ್ಗದಲ್ಲಿ ಅಳವಡಿಸಿದ್ದ ಫ್ಲೆಕ್ಸ್ಗಳಲ್ಲಿ ಸಿಪಿವೈ ಭಾವಚಿತ್ರ ಕಾಣಲಿಲ್ಲ. ಎಲ್ಲೆಲ್ಲೂ ನಿಖಿಲ್ ಭಾವಚಿತ್ರವೇ ಎದ್ದು ಕಾಣುತ್ತಿತ್ತು. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಪಿವೈ ‘ನೆನ್ನೆ ಹಾಕಿದ್ದ ಕಾಂಗ್ರೆಸ್ ಫ್ಲೆಕ್ಸ್ ಅನ್ನು ಇಂದು ಕಿತ್ತುಕೊಂಡು ಹೋಗಿದ್ದಾರೆ. ಇಂದು ಹಾಕಿರುವ ಬಿಜೆಪಿ–ಜೆಡಿಎಸ್ ಫ್ಲೆಕ್ಸ್ ಅನ್ನು ನಾಳೆ ಕಿತ್ತುಕೊಂಡು ಹೋಗುತ್ತಾರೆ. ಹಾಗಾಗಿ ನಾನು ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ನನ್ನ ಭಾವಚಿತ್ರ ಕ್ಷೇತ್ರದ ಜನರ ಮನಸ್ಸಿನಲ್ಲಿದೆ. ನಾನು ಏನಾಗಬೇಕೇಂದು ಜನ ತೀರ್ಮಾನಿಸುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ನಾಯಕರ ಪ್ರತ್ಯೇಕ ನಡಿಗೆ

ಕೆಂಗಲ್ನಿಂದ ಬೆಳಿಗ್ಗೆ 9.30ಕ್ಕೆ ಶುರುವಾಗಬೇಕಿದ್ದ ಪಾದಯಾತ್ರೆಗೆ ಬಿಜೆಪಿ ನಾಯಕರು ಬಂದರೂ ಜೆಡಿಎಸ್ ನಾಯಕರು ಬರಲಿಲ್ಲ. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಜೆಡಿಎಸ್ನವರ ಅನುಪಸ್ಥಿತಿಯಲ್ಲೇ 10.30ರ ಸುಮಾರಿಗೆ ಪಾದಯಾತ್ರೆ ಶುರು ಮಾಡಿದರು. 11 ಗಂಟೆಗೆ ಕೆಂಗಲ್ಗೆ ಬಂದ ಕುಮಾರಸ್ವಾಮಿ ಮತ್ತು ನಿಖಿಲ್ ದೇವರ ದರ್ಶನ ಪಡೆದು ಕಾರಿನಲ್ಲಿ ತೆರಳಿ ಚನ್ನಪಟ್ಟಣದಲ್ಲಿ ಪಾದಯಾತ್ರೆ ಸೇರಿಕೊಂಡರು. ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡುವಾಗ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.