ಹಾರೋಹಳ್ಳಿ: ದಲಿತ ವ್ಯಕ್ತಿಯೊಬ್ಬರ ಆಸ್ತಿ ಕಬಳಿಸಿದ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ದಲಿತ ಸಂಘಟನೆಗಳ ನೇತೃತ್ವದಲ್ಲಿ ತಮಟೆ ಚಳವಳಿ ನಡೆಯಿತು.

ವೆಂಕಟೇಶ್ ಎಂಬುವವರು ಟಿ.ಹೊಸಹಳ್ಳಿ ಸರ್ವೆ ನಂ.12ರಲ್ಲಿ ಸುಮಾರು 30 ವರ್ಷಗಳಿಂದ ಅನುಭೋಗದಲ್ಲಿದ್ದರು. ಮರಳವಾಡಿ ಕಂದಾಯ ಇನ್‌ಸ್ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ಸ್ಥಳ ಪರಿಶೀಲನೆ ಮಾಡಿ ಅನುಭೋಗದಲ್ಲಿದ್ದಾರೆ ಎಂದು ವರದಿ ನೀಡಿದ್ದಾರೆ. ಸರ್ವೆ ಅಧಿಕಾರಿಗಳು ಸ್ಕೆಚ್ ಮಾಡಿ ದಾಖಲೆ ನೀಡಿರುತ್ತಾರೆ. ಆರು ತಿಂಗಳ ನಂತರ ಅಧಿಕಾರಿಗಳು ಫಾರಂ 50-53 ಯಾರು ಅರ್ಜಿ ಸಲ್ಲಿಸಿಲ್ಲ ಮತ್ತು ಅನುಭೋಗದಲ್ಲಿ ಯಾರು ಇರುವುದಿಲ್ಲ ಎಂದು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಜಮೀನು ಕಬಳಿಸಿದ್ದಾರೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ದಲಿತಪರ, ಮೂಲ ನಿವಾಸಿ ಚಳವಳಿ, ಕನ್ನಡ ಪರ ಸಂಘಟನೆಗಳು ಸೇರಿ ಹಾರೋಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ತಮಟೆ ಚಳವಳಿ ಮಾಡಿ ಭ್ರಷ್ಟ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗಳಿಸುವಂತೆ ಆಗ್ರಹಿಸಿರು.

ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಗೋವಿಂದಯ್ಯ, ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್, ರಿಪಬ್ಲಿಕನ್ ಸೇನೆ ಜಿಲ್ಲಾಧ್ಯಕ್ಷ ಬೇಣಚಕಲ್ ದೊಡ್ಡಿ ರುದ್ರೇಶ್, ಕೋಟೆ ಪ್ರಕಾಶ್, ಮುತ್ತಣ್ಣ, ಮೂಲ ನಿವಾಸಿ ಚಳವಳಿ ರಾಜ್ ಮೌರ್ಯ,ಕರ್ನಾಟಕ ರಾಷ್ಟ್ರ ಸಮಿತಿ ಪ್ರಶಾಂತ್, ಕನ್ನಡ ಪರ ಸಂಘಟನೆ ವೆಂಕಟೇಶ್, ಟಿ.ಹೊಸಹಳ್ಳಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.