ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಮಳೆ ಕೊರತೆ, ಅತ್ಯಧಿಕ ತಾಪಮಾನ: ಮಾವು ಇಳುವರಿ ನಿರೀಕ್ಷೆ ಕೇವಲ ಶೇ 10

ತೋಟಗಾರಿಕೆ ಇಲಾಖೆ ಸಮೀಕ್ಷೆ ವರದಿ
Published : 7 ಮೇ 2024, 5:35 IST
Last Updated : 7 ಮೇ 2024, 5:35 IST
ಫಾಲೋ ಮಾಡಿ
Comments
ರೋಗಬಾಧೆ ಮತ್ತು ಅತಿಯಾದ ತಾಪಮಾನದಿಂದಾಗಿ ರಾಮನಗರ ತಾಲ್ಲೂಕಿನಲ್ಲಿ ಒಣಗಿರುವ ಮಾವಿನ ಮರ
ರೋಗಬಾಧೆ ಮತ್ತು ಅತಿಯಾದ ತಾಪಮಾನದಿಂದಾಗಿ ರಾಮನಗರ ತಾಲ್ಲೂಕಿನಲ್ಲಿ ಒಣಗಿರುವ ಮಾವಿನ ಮರ
ಇಳುವರಿ ಕುಸಿತಕ್ಕೆ ಕಾರಣವೇನು?
ವಾಡಿಕೆಯಂತೆ ಸುರಿದ ಮಳೆ– ಮಾರ್ಚ್–ಏಪ್ರಿಲ್‌ನಲ್ಲಿ ಹೆಚ್ಚಿದ ತಾಪಮಾನ– ಕಾಯಿಗಳಿಗೆ ಜೋನಿ ಹುಳುವಿನ ಬಾಧೆ– ಅವಧಿಪೂರ್ವದಲ್ಲೇ ಉದುರಿದ ಹೂವು, ಕಾಯಿ ಅಂಕಿಅಂಶ... 30,067 ಹೆಕ್ಟೇರ್ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ2.35 ಲಕ್ಷ ಮೆಟ್ರಿಕ್ ಟನ್‌ ವಾರ್ಷಿಕ ಮಾವಿನ ಇಳುವರಿ28 ಸಾವಿರಜಿಲ್ಲೆಯಲ್ಲಿರುವ ಮಾವು ಬೆಳೆಗಾರರುಶೇ 95ಜಿಲ್ಲೆಯಲ್ಲಿ ಮಳೆಯಾಶ್ರಿತ ಮಾವು ಪ್ರದೇಶ
ಜಿಲ್ಲೆಯಲ್ಲಿ ಮಾವು ಬೆಳೆಯು ನೆಲ ಕಚ್ಚಿರುವ ಕುರಿತು ನಡೆಸಿರುವ ಸಮೀಕ್ಷೆಯ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ
– ರಾಜು ಎಂ.ಎಸ್ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ರಾಮನಗರ
ತಾಲ್ಲೂಕುವಾರು ಸಮೀಕ್ಷೆ ವಿವರ
* ಚನ್ನಪಟ್ಟಣಸಮೀಕ್ಷೆ ತಂಡವು ತಾಲ್ಲೂಕಿನ 9 ತಾಕುಗಳಿಗೆ ಭೇಟಿ ನೀಡಿತ್ತು. ತಾಪಮಾನವು 36–38 ಡಿಗ್ರಿ ಸೆಲ್ಸಿಯಸ್ ಇದ್ದಿದ್ದರಿಂದ ಹೂವು ಹಾಗೂ ಕಾಯಿಗಳು ಉದುರಿರುವುದು ಮಳೆ ಕೊರತೆಯಿಂದಾಗಿ ಎಲ್ಲಾ ತಳಿಗಳ ಮಾವಿನ ಗಾತ್ರ ತಗ್ಗಿರುವುದು ಹಣ್ಣುಗಳು ರಸವತ್ತತೆ ಕಡಿಮೆಯಾಗಿರುವುದು ಬಿಸಿಲಿಗೆ ಕೆಲ ಮರಗಳು ಒಣಗಿರುವುದು ಜೋನಿ ಮತ್ತು ನುಸಿ ಹುಳು ಬಾಧೆ ಮರಗಳು ಹಳದಿ ಬಣ್ಣಕ್ಕೆ ತಿರುಗಿರುವುದು ಬಾದಾಮಿ ಮಾವಿನಲ್ಲಿ ಸ್ಪಾಂಜಿ ಟಿಶ್ಯೂ ಎಂಬ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹಣ್ಣುಗಳ ಗುಣಮಟ್ಟ ತಗ್ಗಿರುವುದನ್ನು ತಂಡ ಗಮನಿಸಿದೆ. ತಾಲ್ಲೂಕಿನಲ್ಲಿ ಶೇ 8–12ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ಅಂದಾಜಿಸಿದೆ. * ಮಾಗಡಿಶೇ 95ರಷ್ಟು ರೈತರು ತಾಲ್ಲೂಕಿನಲ್ಲಿ ಮಳೆಯಾಶ್ರಯದಿಂದಲೇ ಮಾವು ಬೆಳೆಯುತ್ತಾರೆ. ಸಮೀಕ್ಷೆ ತಂಡ ಇಲ್ಲಿನ 12 ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂಗಾರು ಮಳೆ ಕೊರತೆಯಿಂದ ತೇವಾಂಶ ಕೊರತೆ ಉಂಟಾಗಿ ಹೂವು ಉದುರಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಅತ್ಯಧಿಕ ತಾಪಮಾನವು ಕಾಯಿಗಳು ನಿಂಬೆ ಗಾತ್ರದಲ್ಲಿರುವಾಗಲೇ ಉದುರಲು ಕಾರಣವಾಗಿದೆ. ಕೆಲ ಕಾಯಿಗಳು ಬಿಸಿಲ ಝಳಕ್ಕೆ ಸುಟ್ಟಂತಾಗಿ ಕಂದು ಬಣ್ಣಕ್ಕೆ ತಿರುಗಿವೆ. ಮಣ್ಣಿನ ತೇವಾಂಶ ಕೊರತೆಯಿಂದ ಹಣ್ಣಿನ ಗಾತ್ರ ಕಡಿಮೆಯಾಗಿ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಈ ಎಲ್ಲಾ ಕಾರಣದಿಂದಾಗಿ ತಾಲ್ಲೂಕಿನಲ್ಲಿ ಶೇ 10–12ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ಅಂದಾಜಿಸಿದೆ. * ಕನಕಪುರತಾಲ್ಲೂಕಿನಲ್ಲಿ ಶೇ 92ರಷ್ಟು ಮಾವು ಬೆಳೆಗಾರರಿಗೆ ಮಳೆ ನೆಚ್ಚಿಕೊಂಡಿರುವುದು ಸಮೀಕ್ಷೆ ತಂಡವು ಭೇಟಿ ನೀಡಿದಾಗ ಕಂಡುಬಂತು. ಇಲ್ಲಿನ ಸುಮಾರು 12 ತಾಕುಗಳಿಗೆ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಳೆ ಕೊರತೆಯಿಂದ ತೇವಾಂಶ ಕೊರತೆ ಉಂಟಾಗಿ ಹೂವಿನ ಜೊತೆಗೆ ಕಾಯಿಗಳು ಸಹ ಉದುರಿವೆ. ಅತ್ಯಧಿಕ ತಾಪಮಾನವು ಕಾಯಿಗಳ ಗಾತ್ರದಲ್ಲಿ ಕಡಿಮೆಯಾಲು ಕಾರಣವಾಗಿದೆ. ಕೆಲ ಕಾಯಿಗಳು ಬಿಸಿಲ ಝಳಕ್ಕೆ ಸುಟ್ಟಂತಾಗಿ ಕಂದು ಬಣ್ಣಕ್ಕೆ ತಿರುಗಿವೆ. ಜಿಗಿ ಹುಳುವಿನ ಬಾಧೆಯು ಕಾಯಿಗಳ ಗುಣಮಟ್ಟ ಕುಸಿತಕ್ಕೆ ಕಾರಣವಾಗಿದ್ದು ಮರಗಳು ಅಲ್ಲಲ್ಲಿ ಒಣಗುತ್ತಿರುವುದು ತಂಡದ ಗಮನಕ್ಕೆ ಬಂದಿದೆ. ತಾಲ್ಲೂಕಿನಲ್ಲಿ ಶೇ 8–10ರಷ್ಟು ಇಳುವರಿ ಮಾತ್ರ ನಿರೀಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ. * ರಾಮನಗರಸಮೀಕ್ಷೆ ತಂಡವು ತಾಲ್ಲೂಕಿನ 9 ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಶೇ 92ರಷ್ಟು ಮಾವು ಮಳೆಯಾಶ್ರಿತವಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ತಾಪಮಾನವು 36–38 ಡಿಗ್ರಿ ಸೆಲ್ಸಿಯಸ್ ತಲುಪಿದ್ದರಿಂದ ಹೂವು ಹಾಗೂ ಕಾಯಿಗಳು ಉದುರಿವೆ. ನೀರಿನ ಕೊರತೆಯಿಂದಾಗಿ ಎಲ್ಲಾ ತಳಿಗಳ ಮಾವಿನ ಗಾತ್ರ ತಗ್ಗಿದ್ದು ಹಣ್ಣುಗಳ ರಸವತ್ತತೆ ಕಡಿಮೆಯಾಗಿದೆ. ಬಿಸಿಲಿಗೆ ಅಲ್ಲಲ್ಲಿ ಮರಗಳು ಒಣಗಿವೆ. ಕಾಯಿ ಬಿಟ್ಟರೂ ಹಳದಿ ಬಣ್ಣಕ್ಕೆ ತಿರುಗಿವೆ. ಬಾದಾಮಿ ಮಾವಿನಲ್ಲಿ ಸ್ಪಾಂಜಿ ಟಿಶ್ಯೂ ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಶೇ 10–15ರಷ್ಟು ಮಾತ್ರ ಇಳುವರಿ ಸಿಗಬಹುದು ಎಂದು ತಂಡ ಅಂದಾಜಿಸಿದೆ.
‘ಬೆಳೆಗಾರರ ಉಳಿವಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ’
‘ಮಾವು ಬೆಳೆ ನೆಚ್ಚಿಕೊಂಡಿರುವವರಿಗೆ ತೀವ್ರ ಬರಗಾಲ ಹಾಗೂ ಅತಿಯಾದ ತಾಪಮಾನದಿಂದಾಗಿ ಬೆಳೆ ಕೈ ಸೇರಿಲ್ಲ. ಒಂದು ಕಡೆ ಮಾವಿನ ಇಳುವರಿ ಪಾತಾಳಕ್ಕೆ ಕುಸಿದಿದ್ದರೆ ಮತ್ತೊಂದೆಡೆ ಒಣಗುತ್ತಿರುವ ಮಾವಿನ ಮರಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಬೆಳೆಗಾರರು ಉಳಿಯಬೇಕಾದರೆ ಸರ್ಕಾರ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು’ ಎಂದು ಜಿಲ್ಲಾ ಮಾವು ಮತ್ತು ತೆಂಗು ಬೆಳೆ ರೈತ ಉತ್ಪಾದಕರ ಕಂಪನಿ ನಿರ್ದೇಶಕರೂ ಆಗಿರುವ ರೈತ ಮುಖಂಡ ಸಿ. ಪುಟ್ಟಸ್ವಾಮಿ ಒತ್ತಾಯಿಸಿದರು. ‘ಅತಿಯಾದ ತಾಪಮಾನವು ಬೆಳೆ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಕುರಿತು ವೈಜ್ಞಾನಿಕ ವಿಶ್ಲೇಷಣೆಗೆ ತೋಟಗಾರಿಕೆ ವಿಶ್ವವಿದ್ಯಾನಿಲಯ ತೋಟಗಾರಿಕೆ ತಜ್ಞರು ಹಾಗೂ ವಿಜ್ಞಾನಿಗಳ ನೇತೃತ್ವದಲ್ಲಿ ಪ್ರದೇಶವಾರು ಆಯ್ಕೆ ಮಾಡಿ ಸಮಗ್ರ ಅಧ್ಯಯನ ನಡೆಸಬೇಕು. ಒಣಗುತ್ತಿರುವ ಮಾವಿನ ಮರಗಳ ಪರಿಸ್ಥಿತಿಗೆ ಕಾರಣವೇನು ಎಂಬುದನ್ನು ತಿಳಿಯಲು ಮುಂದಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT