ಹಾರೋಹಳ್ಳಿ: ನಾಗರಿಕ ಸೌಕರ್ಯ ನಿವೇಶನ (ಸಿಎ ಸೈಟ್) ಗಳ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಬಂದಿದ್ದು ಪಿಡಿಒ ಹಾಗೂ ಅಧ್ಯಕ್ಷರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.

ಹಾರೋಹಳ್ಳಿ ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಸಿಎ ಸೈಟ್ ಒತ್ತುವರಿ ಆಗಿರುವ ಬಗ್ಗೆ ದೂರು ಬಂದಿದ್ದು ಮಂಗಳವಾರ ಪಿಡಿಒ ವಿಜಯ್ ಕುಮಾರ್ ಹಾಗೂ ಅಧ್ಯಕ್ಷರಾದ ಸುಧಾ ನಾಗೇಶ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಒತ್ತುವರಿ ಆಗಿರುವುದು ದೃಢಪಟ್ಟಿದ್ದು ಸರ್ವೆ ಕಾರ್ಯ ನಡೆಸಿ ತೆರವುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಬನ್ನಿಕುಪ್ಪೆ ಗ್ರಾಮದ ಸಿಎ ಸೈಟನ್ನು ಪ್ರಭಾವಿಗಳು ಒತ್ತುವರಿ ಮಾಡಿ ತಾತ್ಕಾಲಿಕ ಮನೆ ಕಟ್ಟಿದ್ದರು. ಅವುಗಳಿಗೆ ನೋಟಿಸ್ ನೀಡಿ ತೆರವುಗೊಳಿಸಿ ಜೊತೆಗೆ ಐದು ಸಿಎ ಸೈಟ್ಗಳ ಮುಂದಿನ ದಿನಗಳಲ್ಲಿ ತಂತಿಬೇಲಿ ನಿರ್ಮಿಸಿ ಗ್ರಾ.ಪಂ ಸುಪರ್ದಿಗೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.