ಚನ್ನಪಟ್ಟಣ (ರಾಮನಗರ): ‘ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಕೆಲವರು ವರ್ಗಾವಣೆ ದಂಧೆ ವಿಚಾರವಾಗಿ ಮೈಸೂರಿನಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹಣ ಹಂಚಿಕೆ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದ ಒಬ್ಬ ಮಂತ್ರಿಯನ್ನು ಬಹಿರಂಗವಾಗಿ ಹೊಡೆಯುತ್ತಾರೆ ಎಂದರೆ ಈ ರಾಜ್ಯ ಎಲ್ಲಿಗೆ ಬಂದಿದೆ ಎಂಬುದನ್ನು ಗಮನಿಸಬೇಕು’ ಎಂದರು.

ಮೈಸೂರಿನಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೋಡಂಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ‘ವಿಧಾನ ಪರಿಷತ್ ಮಾಜಿ ಸದಸ್ಯ ಕೀಲಾರ ಜಯರಾಂ ಮತ್ತು ನನ್ನ ನಡುವೆ ಯಾವುದೇ ಗಲಾಟೆ ಆಗಿಲ್ಲ. ಬೇಕಿದ್ದರೆ ಅವನನ್ನೇ ಹೋಗಿ ಕೇಳಿ. ಮಾತನಾಡಿದ್ದಕ್ಕೆಲ್ಲಾ ಗಲಾಟೆ ಎನ್ನಲಾಗುತ್ತದೆಯೇ. ನಾವು ಸ್ನೇಹಿತರು. ಜಗಳ ಆಡ್ತೀವಿ ಅದರಲ್ಲಿ ತಪ್ಪೇನಿದೆ. ಜಯರಾಂ ನಮ್ಮ ಹುಡುಗ ಬಿಟ್ಟಾಕಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.