ಆನೇಕಲ್ : ಬೇಗೂರಿನ ಸರ್ಕಾರಿ ಪ್ರೌಢ ಶಾಲೆಗೆ ರೋಟರಿ ಬೆಂಗಳೂರು ಮಿಡ್ ಟೌನ್ ಕೊಡುಗೆ ನೀಡಿದ ವಿಜ್ಞಾನ ಪ್ರಯೋಗಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.

‘ಲ್ಯಾಬ್ ಇನ್ ಕ್ಲಾಸ್ ರೂಂ’ ಎಂಬ ಉದ್ದೇಶದಿಂದ ವಿವಿಧ ಚಟುವಟಿಕೆ ರೂಪಿಸಿ ಪ್ರಯೋಗಾಲಯ ವಿನ್ಯಾಸಗೊಳಿಸಲಾಗಿದೆ. 6-8ನೇ ತರಗತಿ ವಿದ್ಯಾರ್ಥಿಗಳ ಪಠ್ಯ ಆಧರಿಸಿ ಪ್ರಯೋಗಗಳನ್ನು ರೂಪಿಸಲಾಗಿದೆ. ವರ್ಕ್ ಬುಕ್, ಸಾಫ್ಟ್‌ವೇರ್ ಅಪ್ಲಿಕೇಷನ್ ರಚಿಸಿದ್ದು ವಿದ್ಯಾರ್ಥಿಗಳಲ್ಲಿ ನವೀನ ಕೌಶಲ ಅಭಿವೃದ್ಧಿ ಪಡಿಸಲು ಉಪಯುಕ್ತವಾಗಿದೆ.

ಪ್ರಯೋಗಾಲಯ ಉದ್ಘಾಟಿಸಿದ ರೋಟರಿ ಕ್ಲಬ್ ಅಧ್ಯಕ್ಷ ಪಳನಿ ಲೋಕನಾಥನ್, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು ಎಂಬುದು ರೋಟರಿ ಕ್ಲಬ್‌ನ ಗುರಿಯಾಗಿದೆ ಎಂದರು.

ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳು ಸಂಶೋಧನೆ, ಸೃಜನಶೀಲತೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಅನುಕೂಲವಾಗುಂತೆ ಸೌಲಭ್ಯ ಕಲ್ಪಿಸಲಾಗಿದೆ. ಪ್ರಾಯೋಗಿಕ ಅನುಭವ ನೀಡಲು ಅನುಕೂಲವಾಗುವಂತೆ ರೂಪಿಸಿದ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.

ಬೇಗೂರು ಸರ್ಕಾರಿ ಶಾಲೆಗೆ ಪ್ರಾಯೋಗಿಕವಾಗಿ ಪ್ರಯೋಗಾಲಯ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಲ್ಲಿ ಇತರೆ ಸರ್ಕಾರಿ ಶಾಲೆಗಳಿಗೂ ಪ್ರಯೋಗಾಲಯದ ಸೌಲಭ್ಯ ವಿಸ್ತರಿಸಲಾಗುವುದು ಎಂದು ಸನ್‌ಸೇರಾ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಎಫ್.ಆರ್.ಸಿಂಘ್ವಿ ಹೇಳಿದರು.

ಸ್ಕಿಕ್ರಾಫ್ಟ್‌ನ ಸಿಇಓ ಪ್ರವೀಣ್ ಸುಬ್ರಮಣ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಶಶಿಕಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.