ರಾಮನಗರ: ಶಾಸಕ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹಕ್ಕಾಗಿ ಚನ್ನಪಟ್ಟಣ–ರಾಮನಗರ ನಡುವೆ ಜಾಗದ ಹುಡಕಾಟ ನಡೆದಿದೆ. ಜಾನಪದ ಲೋಕದ ಬಳಿ 54 ಎಕರೆ ಜಮೀನನ್ನು ಎಚ್ಡಿಕೆ ಪರಿಶೀಲಿಸಿದ್ದು, ಅದರ ಮಾಲೀಕರೊಂದಿಗೆ ಔಪಚಾರಿಕ ಮಾತುಕತೆಯನ್ನೂ ನಡೆಸಿದ್ದಾರೆ.

ಈ ಜಾಗವು ರಾಮನಗರದಿಂದ 5 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಇದೆ. ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ಗೆ ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆಯೂ ಸೇರಿದಂತೆ ಒಟ್ಟು 54 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ.

ಈ ಸ್ಥಳ ಅಂತಿಮಗೊಂಡಲ್ಲಿ ಇಲ್ಲಿಯೇ ಅದ್ದೂರಿ ಸೆಟ್ ಹಾಕಿ ನಿಖಿಲ್–ರೇವತಿ ವಿವಾಹ ನಡೆಸಲು ಎಚ್ಡಿಕೆ ನಿರ್ಧರಿಸಿದ್ದಾರೆ. ಮಂಟಪ, ಭೋಜನಾಲಯ, ವಿಐಪಿ ಲಾಂಜ್. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮೊದಲಾದ ಸೌಕರ್ಯಗಳು ನಿರ್ಮಾಣ ಆಗಲಿವೆ. ಇದೇ 10ರಂದು ನಿಖಿಲ್ ನಿಶ್ಚಿತಾರ್ಥ ನಡೆಯಲಿದ್ದು, ಬಳಿಕ ಎಚ್ಡಿಕೆ ದಂಪತಿ ಸ್ಥಳವನ್ನು ಅಂತಿಮಗೊಳಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.