ರಾಮನಗರ: ‘ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರಿಗೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳನ್ನು ಒದಗಿಸಲು ಶ್ರಮಿಸಿದ ಮಡಿವಾಳ ಮಾಚಿದೇವ ವಚನಗಳ ರಕ್ಷಕ’ ಎಂದು ಮಡಿವಾಳ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಡಿವಾಳ ಸಮುದಾಯದವರಿಗೆ ಹಲವು ಸಮಸ್ಯೆಗಳಿವೆ. ಸರ್ಕಾರ ಐರನ್ ಬಾಕ್ಸ್ ವಿತರಣೆ, ವಸತಿ ಯೋಜನೆ, ಅಂಗಡಿ ಮುಂಗಟ್ಟುಗಳಿಗೆ ಪರವಾನಗಿಯಂತಹ ಸಹಾಯ ಒದಗಿಸಬೇಕು ಎಂದು ಮನವಿ
ಮಾಡಿದರು.

ಬಸವ ಸಮಿತಿ ಅಧ್ಯಕ್ಷ ರೇಣುಕಯ್ಯ ಮಾತನಾಡಿ, ಮಹಾಜ್ಞಾನಿಗಳಾದ ಮಾಚಿದೇವರು ಬಸವಣ್ಣನವರ ಅನುಯಾಯಿ ಆಗಿದ್ದರು. ಮಾಚಿದೇವರು ಮಾನವೀಯ ಗುಣಗಳುಳ್ಳ ಶರಣರ ಬಟ್ಟೆಗಳನ್ನು ಮಾತ್ರ ಶುಚಿಗೊಳಿಸುವುದಾಗಿ ತಿಳಿಸಿ ಬಿಜ್ಜಳ ಮಹಾರಾಜರ ಬಟ್ಟೆಗಳನ್ನು ಶುಚಿಗೊಳಿಸದೆ ತಿರಸ್ಕರಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದರು ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹರೀಶ್, ಮಡಿವಾಳ ಸಂಘದ ವೀರಭದ್ರಯ್ಯ, ಕೆ. ನಿಂಗರಾಜು, ಮೀನುಗಾರಿಕೆ ಇಲಾಖೆಯ ಸಿದ್ದರಾಮಯ್ಯ, ಕೆ, ನಂದಗೋಕುಲ ವೃದ್ಧಾಶ್ರಮದ ಲೋಕೇಶ್, ರಂಗಪ್ಪ, ಜಯದೇವ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.