ಹವಾಮಾನ ವೈಪರೀತ್ಯದಿಂದಾಗಿ ರಾಮನಗರ ತಾಲ್ಲೂಕಿನ ಬಿಳಗುಂಬ ಬಳಿಯ ಮಾವಿನತೋಟದ ಮರದಲ್ಲಿ ಎಲೆಗಳು ಉದುರಿ ಒಣಗಿರುವುದು
ಸಿ. ಪುಟ್ಟಸ್ವಾಮಿ ಹಿರಿಯ ರೈತ ಮುಖಂಡ ಚನ್ನಪಟ್ಟಣ
ಗಂಗರಾಜು ಮಾವು ಬೆಳೆಗಾರ ಅರೇಹಳ್ಳಿ ರಾಮನಗರ ತಾಲ್ಲೂಕು
ಮಾವು ಬೆಳೆ ಉಳಿಸಿಕೊಳ್ಳಲು ಎಷ್ಟೇ ಪರದಾಡಿದರು ಸಾಧ್ಯವಾಗಿಲ್ಲ. ನೀರಿನ ಕೊರತೆ ಮತ್ತು ಅತಿಯಾದ ಬಿಸಿಲಿಗೆ ಬೆಳೆ ಕೈ ಸೇರಿಲ್ಲ. ಸರ್ಕಾರ ನಮ್ಮ ನೆರವಿಗೆ ಬಾರದಿದ್ದರೆ ಬೆಳೆಗಾರರು ಮತ್ತಷ್ಟು ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ
- ಗಂಗರಾಜು ಮಾವು ಬೆಳೆಗಾರ ಅರೇಹಳ್ಳಿ ರಾಮನಗರ ತಾಲ್ಲೂಕುರಾಜು ಎಂ.ಎಸ್ ಉಪ ನಿರ್ದೇಶಕರು ತೋಟಗಾರಿಕೆ ಇಲಾಖೆ ರಾಮನಗರ
‘ಪಾವತಿಗೆ ವಿಮಾ ಕಂಪನಿಗೆ ಪತ್ರ’
‘ಮಾವು ಬೆಳೆ ನಷ್ಟಕ್ಕೆ ಅತಿಯಾದ ತಾಪಮಾನದ ಹವಾಮಾನ ವೈಪರೀತ್ಯ ಮಾನದಂಡವನ್ನು ಸಹ ಪರಿಗಣಿಸಿ ಬೆಳೆಗಾರರಿಗೆ ವಿಮೆ ಪರಿಹಾರ ಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಮೂಲಕ ಪತ್ರ ಬರೆಯಲಾಗಿದೆ. ನಷ್ಟದಲ್ಲಿರುವ ಮಾವು ಬೆಳೆಗಾರರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಮಾವು ನಷ್ಟದ ಜಂಟಿ ಸಮೀಕ್ಷೆ ನಡೆಸಿ ವರದಿ ಪರಿಶೀಲಿಸಿದ ಬಳಿಕ ಕಂಪನಿಗೆ ಪತ್ರ ಹೋಗಿದೆ. ಆದರೆ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹80 ಸಾವಿರ ವಿಮೆ ಮೊತ್ತ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಜು ಎಂ.ಎಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆರ್. ಚಿಕ್ಕಬೈರೇಗೌಡ ಅಧ್ಯಕ್ಷ ರಾಮನಗರ ಜಿಲ್ಲೆ ಮಾವು ಬೆಳೆಗಾರರ ಸಂಘ