ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನಾಗರಾಜು(ಪಾಪಣ್ಣ) ಮತ್ತು ಉಪಾಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಮಂಗಳವಾರ ಎರಡೂ ಸ್ಥಾನಗಳಿಗೆ ಚುನಾವಣೆಯ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಪ್ರವರ್ಗ(ಬಿ) ಕ್ಷೇತ್ರದ ನಿರ್ದೇಶಕ ನಾಗರಾಜು(ಪಾಪಣ್ಣ) ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದ ನಿರ್ದೇಶಕ ಬಿ.ಸಿ. ಬಸವರಾಜು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ನಾಗರಾಜು 7 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಬಸವರಾಜು(5 ಮತ) ಅವರನ್ನು 2 ಮತಗಳ ಅಂತರದಿಂದ ಸೋಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಎಸ್ಸಿ ಮೀಸಲು ಕ್ಷೇತ್ರದ ನಿರ್ದೇಶಕ ಕೃಷ್ಣಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹಿಳಾ ಮೀಸಲು ಕ್ಷೇತ್ರದ ಅಭ್ಯರ್ಥಿ ಬಿ.ಪಿ. ಭಾರತಿ ನಾಮಪತ್ರ ಸಲ್ಲಿಸಿದ್ದರು. ಕೃಷ್ಣಪ್ಪ 7 ಮತ ಪಡೆದು, ಎದುರಾಳಿ ಬಿ.ಪಿ. ಭಾರತಿ(5 ಮತ) ಅವರ ವಿರುದ್ಧ 2 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು.

ಸಂಘದ 12 ಜನ ನಿರ್ದೇಶಕರು ಮತ ಚಲಾಯಿಸಿದರು. ರಾಮನಗರ ಉಪವಿಭಾಗ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧೀಕ್ಷಕ ಎಸ್. ನಾಗೇಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಬಿಡದಿ ಹೋಬಳಿ ಯುವ ಜೆಡಿಎಸ್ ಘಟಕದ ಅಧ್ಯಕ್ಷ ಜಗದೀಶ್ಗೌಡ ಸನ್ಮಾನಿಸಿದರು. ಸಂಘದ ನಿರ್ದೇಶಕರಾದ ಗಿರಿಜಮ್ಮ, ಸಂಬಮ್ಮ, ಜಿ. ಕುಮಾರಸ್ವಾಮಿ, ರಮೇಶ್ ಬಿ.ಕೆ. ಶ್ರೀಧರ್, ಮುಖಂಡರಾದ ಬಾನಂದೂರು ಪಾಪಣ್ಣ, ಶಿವಕುಮಾರ್, ಗೌಡ್ರುಮನೆ ರಾಜೇಶ್, ಸಮೃದ್ಧಿ ರೇಣುಕಪ್ರಸಾದ್, ಬಿ.ಪಿ.ರಾಮು, ಶೇಖರ್, ಪ್ರಕಾಶ್, ಧನರಾಜ್, ಸದಾಶಿವಯ್ಯ, ಪುರಸಭೆ ಮಾಜಿ ಸದಸ್ಯರಾದ ಸಂತೋಷ್ಕುಮಾರ್. ಪುಟ್ಟಮಾದೇಗೌಡ (ರಾಜಣ್ಣ) ಶಿವಕುಮಾರ್, ಲಿಂಗರಾಜು, ಕುಮಾರ, ಚಂದ್ರಶೇಖರ್, ಸುನಂದಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.