ಚನ್ನಪಟ್ಟಣ: ತಾಲ್ಲೂಕಿನ ಮುದಗೆರೆ ಬಳಿಯ ಚಾಮುಂಡೇಶ್ವರಿ ವೈದ್ಯಕೀಯ ಮಹಾವಿದ್ಯಾಲಯಲ್ಲಿ ‘ಸುಗ್ಗಿ ಸಂಭ್ರಮ’ ಶೀರ್ಷಿಕೆಯಡಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

ವಿದ್ಯಾಲಯದಲ್ಲಿ ದೇಶದ ವಿವಿಧ ರಾಜ್ಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಆಚರಿಸುತ್ತಾರೆ ಎಂಬುದರ ಕುರಿತು ನೃತ್ಯದ ಮೂಲಕ ಪ್ರದರ್ಶಿಸಿದರು. ವೈದ್ಯಕೀಯ ವಿದ್ಯಾರ್ಥಿಗಳು ಕಬ್ಬಿನ ಜಲ್ಲೆಯಿಂದ ಮನುಷ್ಯನ ಅಸ್ತಿಪಂಜರ ತಯಾರಿಸಿದ್ದು, ವಿಶೇಷವಾಗಿತ್ತು. ಚಿತ್ತಾರದ ಪೇಯಿಂಟ್, ಬಣ್ಣ ಬಣ್ಣಗಳಿಂದ ಕಂಗೊಳಿಸದ ರಂಗೋಲಿಗಳು ಸಂಕ್ರಾಂತಿ ಸಂಭ್ರಮಕ್ಕೆ ಮೆರಗು ತಂದವು.

ಗೋಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎತ್ತಿನ ಗಾಡಿಯಲ್ಲಿ ಕಾರ್ಯಕ್ರಮ ಜಾಗಕ್ಕೆ ತೆರಳಿದರು. ನಂತರ ಸಂಕ್ರಾಂತಿಯ ವಿಶೇಷವಾಗಿ ಗಾಳಿಪಟ ಹಾರಿಸುವ ಕಾರ್ಯಕ್ರಮ ನಡೆಯಿತು. ಮಡಕೆ ಮಾಡುವುದು, ಮಡಕೆ ಒಡೆಯುವುದು ಹೀಗೆ ಹಲವಾರು ದೇಸಿ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ವಿದ್ಯಾರ್ಥಿಗಳು ಹತ್ತಿರದ ಹಳ್ಳಿಗಳಿಗೆ ತೆರಳಿ ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನು ಬದಲಿಸುವುದರ ಜತೆಗೆ ವಾತಾವರಣದಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ಎಣ್ಣೆ ಅಂಶ ಅಗತ್ಯವಾಗಿರುತ್ತದೆ. ಎಳ್ಳು, ಕೊಬ್ಬರಿ, ಶೇಂಗಾ ಸಾಕಷ್ಟು ಎಣ್ಣೆ ಅಂಶ ಹೊಂದಿದ್ದು ತಮ್ಮ ದೇಹಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂಬುದನ್ನು ಜನರಿಗೆ ತಿಳಿಸಿ, ಎಳ್ಳು-ಬೆಲ್ಲ ಹಂಚುವ ಮೂಲಕ ಸಂಕ್ರಾಂತಿ ಶುಭಾಶಯ ಕೋರಿದರು.

ವೈದ್ಯಕೀಯ ಮಹಾ ವಿದ್ಯಾಲಯದ ಅಡ್ವೈಸರ್ ಡಾ.ನವೀನ್, ಪ್ರಾಂಶುಪಾಲ ಡಾ.ಜಿ.ಯು.ಪ್ರವೀಣ್, ಅಧೀಕ್ಷಕ ಡಾ.ರೋಷನ್ ಕುಮಾರ್, ಬೋಧಕ ಹಾಗೂ ಬೋಧಕೇತರ ವರ್ಗದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.