ವೈದ್ಯರಿಲ್ಲದೆ ರೋಗಿಗಳು ಕಾಯುತ್ತಿರುವುದು
ಆಸ್ಪತ್ರೆ ಕಟ್ಟಡ ಕಟ್ಟಿ ಉಳಿದಿರುವ ಜಾಗ
ಆಸ್ಪತ್ರೆಯಲ್ಲಿರುವ ಕ್ವಾರ್ಟಸ್
ಕೋಡಿಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ವರ್ಷದಿಂದ ವೈದ್ಯಾಧಿಕಾರಿ ಇಲ್ಲದ ಕಾರಣ ಹೊಸದುರ್ಗ ಮತ್ತು ಕೋಟೆಕೊಪ್ಪದ ವೈದ್ಯರನ್ನೇ ಪ್ರಭಾರಿಯಾಗಿ ನಿಯೋಜನೆ ಮಾಡಲಾಗಿದೆ. ಇಲ್ಲಿ ಜನರಿಗೆ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗುತ್ತಿದೆ. ಒಂದು ತಾಲ್ಲೂಕಿಗೆ 2 ಸಿಎಚ್‌ಸಿ ಮಾಡಲು ಅವಕಾಶ ಇರುವುದರಿಂದ ಕೋಡಿಹಳ್ಳಿಯಲ್ಲಿ 30 ಹಾಸಿಗೆಯ ಸಿಎಚ್‌ಸಿ ಮಾಡಿದರೆ ಜನರಿಗೆ ಅನುಕೂಲ ಆಗಲಿದೆ. ಇದಕ್ಕಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಕಳುಹಿಸಲಾಗಿದೆ. ಸರ್ಕಾರ ಮಂಜೂರಾತಿ ನೀಡಿದರೆ ಸೀನಿಯರ್ ಮೆಡಿಕಲ್ ಆಫೀಸರ್ ಸೇರಿದಂತೆ 7 ವೈದ್ಯರು ಇಲ್ಲಿಗೆ ಬರಲಿದ್ದಾರೆ. ದಿನದ 24 ಗಂಟೆಯೂ ಇಲ್ಲಿ ಆರೋಗ್ಯ ಸೇವೆ ಸಿಗಲಿದೆ.
ಡಾ.ರಾಜು, ತಾಲ್ಲೂಕು ಆರೋಗ್ಯ ಅಧಿಕಾರಿ, ಕನಕಪುರ