ಶಿವಮೊಗ್ಗ: ವಿವಿಧ ಅಪರಾಧ ಪ್ರಕರಣಗಳಲ್ಲಿ ರೌಡಿ ಶೀಟರ್‌ಗಳಾಗಿ ದಾಖಲಾಗಿರುವವರಿಗೆ ನಗರದ ಡಿಆರ್ ಮೈದಾನದಲ್ಲಿ ಎಸ್ಪಿ ಡಾ.ಲಕ್ಷ್ಮೀ ಪ್ರಸಾದ್ ಪರೇಡ್ ನಡೆಸಿದರು.

ಶಿವಮೊಗ್ಗ ಗ್ರಾಮಾಂತರ, ದೊಡ್ಡಪೇಟೆ, ಕೋಟೆ, ತುಂಗಾ ನಗರ, ವಿನೋಬ ನಗರ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿರುವ 175 ರೌಡಿಗಳ ಪರೇಡ್ ನಡೆಸಿ, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರು ವವರಿಗೆ ಎಚ್ಚರಿಕೆ ನೀಡಿದರು.

‘6 ಠಾಣೆಗಳ ರೌಡಿ ಶೀಟರ್‌ಗಳಲ್ಲಿರುವ ಕೆಲ ರೌಡಿಗಳು ರೌಡಿ ಚಟುವಟಿಕೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳತ್ತಿರಲಿಲ್ಲ. ಅಂತಹವರಿಗೆ ಡಿಸೆಂಬರ್‌ವರೆಗೆ ಸಮಯ ನೀಡಲಾಗಿದೆ. ಬಳಿಕ ಅವರ ಚಲನವಲನಗಳನ್ನು ಗಮನಿಸಿಕೊಂಡು ರೌಡಿ ಶೀಟರ್‌ನಿಂದ ಕೈಬಿಡಬಹುದಾ ಅಥವಾ ಬೇಡವಾ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಆ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಕಡಕ್ ಎಚ್ಚರಿಕೆ ನೀಡಲಾಗುತ್ತಿದೆ. ಜತೆಗೆ ಅವರ ಚಲನವಲನಗಳನ್ನು ಸಹ ಗಮನಿಸಲಾಗಿದೆ’ ಎಂದು ತಿಳಿಸಿದರು.

ಇದುವರೆಗೂ ರೌಡಿ ಚಟುವಟಿಕೆ ಗಳಲ್ಲಿ ಗುರುತಿಸಿ ಕೊಂಡಿರುವ 9 ಜನರನ್ನು ಗಡಿಪಾರು ಮಾಡುವಂತೆ ಉಪವಿಭಾಗಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 1400ಕ್ಕೂ ಹೆಚ್ಚು ಗೂಂಡಾಗಳಿದ್ದಾರೆ. ಶಿವಮೊಗ್ಗ ಉಪವಿಭಾಗದಲ್ಲಿ 800 ರೌಡಿಗಳಿದ್ದು, ಅದರಲ್ಲಿ 6 ಪೊಲೀಸ್ ಠಾಣೆಗಳಿಂದ 175 ರೌಡಿಗಳ ಪರೇಡ್ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.