ತೀರ್ಥಹಳ್ಳಿ: ತಾಲ್ಲೂಕಿನ ಆಗುಂಬೆ ಸಮೀಪ ನಾಲೂರಿನ ಬಿಳಚಿಕಟ್ಟೆ ಬಳಿ ಶನಿವಾರ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದ ಧರೆಯ ಮೇಲಿಂದ ಕಾಡುಕೋಣವೊಂದು ಉರುಳಿಬಿದ್ದು ಗಾಯಗೊಂಡಿದೆ.

ಕಾಲು ಮುರಿದಿರಬಹುದು ಎಂದು ಶಂಕಿಸಲಾಗಿದೆ. ತೀವ್ರವಾದ ಪೆಟ್ಟು ಬಿದ್ದ ಕಾರಣ ನರಳುತ್ತಿದ್ದ ಕಾಡುಕೋಣ ಸ್ಥಳದಿಂದ ಕದಲಲಿಲ್ಲ.
ಈ ಮಾರ್ಗದಲ್ಲಿ ಸಂಚರಿಸುತ್ತಿರವ ಪ್ರಯಾಣಿಕರು ಕಾಡುಕೋಣವೊಂದು ಚರಂಡಿಯಲ್ಲಿ ಬಿದ್ದಿರುವುದನ್ನು ಗಮನಿಸಿದರು. ಪ್ರಯಾಣಿಕರಲ್ಲಿ ಹಲವರು ತಮ್ಮ ಮೊಬೈಲ್‌ನಲ್ಲಿ ಫೋಟೊ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಡುಕೋಣ ರಕ್ಷಣೆಗೆ ಸೂಕ್ತ ಕ್ರಮ ತೆಗೆದುಕೊಂಡರು.

ಕೆಲ ದಿನಗಳ ಹಿಂದೆ ಸಮೀಪದ ಕೊಳಗಿಯಲ್ಲಿ ಕಾಡುಕೋಣವೊಂದು ಮೃತಪಟ್ಟಿರುವುದು ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.