ಶುದ್ಧ ನೀರಿನ ಘಟಕದಲ್ಲಿ ಸ್ವಚ್ಛತೆ ಮರೀಚಿಕೆ: ನಿರ್ವಹಣೆಗೆ ಸಾರ್ವಜನಿಕರ ಆಗ್ರಹ
ಕಿರಣ್ ಕುಮಾರ್
Published : 19 ಜನವರಿ 2024, 7:20 IST
Last Updated : 19 ಜನವರಿ 2024, 7:20 IST
ಫಾಲೋ ಮಾಡಿ
Comments
ತರೀಕೆರೆ ರಸ್ತೆಯಲ್ಲಿ ನಗರಸಭೆ ಪಕ್ಕದಲ್ಲೇ ಇರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿರುವುದು
ಕುಡಿಯುವ ನೀರಿನ ಘಟಕವೇನೋ ಇದೆ. ಆದರೆ ನೀರು ಕುಡಿಯುವುದಕ್ಕಾಗಿ ಲೋಟದ ವ್ಯವಸ್ಥೆ ಮಾಡಿಲ್ಲ. ನೀರಿನ ಘಟಕದಲ್ಲಿ ಸ್ವಚ್ಛತೆ ಇಲ್ಲ–ರಾಕೇಶ್ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಲಕ್ಷಗಟ್ಟಲೆ ಹಣ ವ್ಯಯಿಸಿ ಸರ್ಕಾರ ಸಾರ್ವಜನಿಕರಿಗೆಂದು ಶುದ್ಧ ನೀರಿನ ಘಟಕ ಸ್ಥಾಪಿಸಿದೆ. ನಾಮಕಾವಸ್ಥೆ ಘಟಕಗಳನ್ನು ತೆರೆದರೆ ಸಾಲದು. ಸಂಬಂಧಪಟ್ಟವರು ಸರಿಯಾಗಿ ನಿರ್ವಹಣೆ ಮಾಡಬೇಕು. ಆಗ ಅದರ ಮೂಲ ಆಶಯ ಸಾಕಾರಗೊಳ್ಳಲಿದೆ
–ಲಿಂಗವ್ವ ತರಕಾರಿ ವ್ಯಾಪಾರಿ
ಘಟಕದ ನಿರ್ವಹಣೆಗೆಂದೇ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 6 ತಿಂಗಳಿಗೆ ಒಮ್ಮೆ ಫಿಲ್ಟರ್ ಬದಲಾಯಿಸಲಾಗುತ್ತದೆ. ಪ್ರತಿದಿನ ಘಟಕಗಳಲ್ಲಿ ನೀರು ಭರ್ತಿ ಮಾಡಲಾಗುತ್ತದೆ. ಸಮಸ್ಯೆಗಳು ದೂರುಗಳು ಇದ್ದರಲ್ಲಿ ತಕ್ಷಣವೇ ಸರಿಪಡಿಸಲಾಗುವುದು