ಹೊಸನಗರ: ‘ಶಾಸಕ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಹೇಳನ ಮಾಡಿ ಮಾತನಾಡಿದ್ದು, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಅರಳಸುರಳಿ ಕೆ.ವಿ.ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಆರಗ ಜ್ಞಾನೇಂದ್ರ ಅವರಂತಹ ಕೆಟ್ಟ ಮನಸ್ಥಿತಿಯ ಜನನಾಯಕರನ್ನು ಕ್ಷೇತ್ರದ ಜನತೆ ಶಾಸಕರಾನ್ನಾಗಿ ಆಯ್ಕೆ ಮಾಡಿ ತಲೆ ತಗ್ಗಿಸುವಂತ ಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ವಿಚಾರಗಳನ್ನು ಬೀದಿಗೆ ತರುವುದು ಖಂಡನೀಯ. ಮನುವಾದ ಹೊತ್ತಿರುವ ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ತಾಲ್ಲೂಕು ಸಂಚಾಲಕ ಡಿ.ಮಂಜುನಾಥ, ಪದಾಧಿಕಾರಿಗಳಾದ ಎಂ.ನಾಗೇಂದ್ರ, ಹೊಸಮನೆ ಉಮೇಶ್, ಸಂಪೇಕಟ್ಟೆ ಸಂದೇಶ್, ನಾಗರಾಜ ಕೆ.ಇಂದಿರಾನಗರ, ಅಣ್ಣಪ್ಪ ಅರಳಿಸುರಳಿ, ಸುಬ್ರಹ್ಮಣ್ಯ, ಜಯನಗರ ಗುರು, ಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.