ಶಿವಮೊಗ್ಗ: ಇಲ್ಲಿನ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ರಸ್ತೆಗಳ ಗುಂಡಿ ಮುಚ್ಚಲು ಡಾಂಬರ್ ಇಲ್ಲದ ಕೋಲ್ಡ್ ಪ್ಯಾಚ್ ಮಿಶ್ರಣ ಅವಿಷ್ಕರಿಸಿದ್ದಾರೆ. ಮಳೆಗಾಲ ಸೇರಿದಂತೆ ಯಾವುದೇ ಕಾಲದಲ್ಲಿಯೂ ದಟ್ಟ ವಾಹನ ಸಂಚಾರದ ನಡುವೆಯೂ ಈ ಮಿಶ್ರಣವನ್ನು ಗುಂಡಿ ಮುಚ್ಚಲು ಉಪಯೋಗಿಸಬಹುದು.

ಇಲ್ಲಿನ ಉಷಾ ನರ್ಸಿಂಗ್ ಹೋಂ ಫ್ಲೈ ಓವರ್ ನಂತರ ಸಿಗುವ ಸವಳಂಗ ಮುಖ್ಯ ರಸ್ತೆಯಲ್ಲಿ ಗುರುವಾರ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸಮ್ಮುಖದಲ್ಲಿ ರಸ್ತೆಯ ಗುಂಡಿಗಳಿಗೆ ಹಾಕಿ ಅದರ ಪ್ರಾತ್ಯಕ್ಷಿಕೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ‘ವಿದ್ಯಾರ್ಥಿಗಳ ನಾವೀನ್ಯ ಚಿಂತನೆಗಳನ್ನು ಯೋಜನೆಯಾಗಿ ರೂಪಿಸುವಲ್ಲಿ ವಿದ್ಯಾಸಂಸ್ಥೆ ನೀಡುತ್ತಿರುವ ಆತ್ಮವಿಶ್ವಾಸ ತುಂಬುವ ಕೆಲಸ ಶ್ಲಾಘನೀಯ’ ಎಂದರು.

‘ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಈ ಉತ್ಪನ್ನದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆಯುವೆ. ದೇಶದಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಅಪಘಾತ ಪ್ರಕರಣ ರಸ್ತೆ ಗುಂಡಿಗಳಿಂದ ಸಂಭವಿಸುತ್ತಿವೆ. ಮಳೆಗಾಲದಲ್ಲಿ ಬೀಳುವ ರಸ್ತೆ ಗುಂಡಿಗಳನ್ನು ತಕ್ಷವೇ ಮುಚ್ಚಲು ಇದು ನೆರವಾಗಲಿದೆ. ವಿದ್ಯಾರ್ಥಿಗಳ ಕಾರ್ಯ ಅಭಿನಂದನಾರ್ಹ’ ಎಂದು ತಿಳಿಸಿದರು.

‘ಕಟ್ಬ್ಯಾಗ್ ಎಮಲ್ಷನ್ ಬಳಸಿ ನಿರ್ಮಾಣ ಮಾಡಿರುವ ಈ ಉತ್ಪನ್ನವನ್ನು ಬಳಸಲು ವಿಶೇಷ ಪರಿಣತಿಯ ಅವಶ್ಯಕತೆ ಇಲ್ಲ. ರೋಡ್ ಕಟ್ಟಿಂಗ್ ಗಳಿಗೆ, ರಸ್ತೆ ಗುಂಡಿಗಳಿಗೆ ಈ ಉತ್ಪನ್ನ ಉಪಯುಕ್ತವಾಗಿದೆ. ಇದು 2ರಿಂದ 5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ರಸ್ತೆಗೆ ಹಾಕಿದ ಕೆಲವೇ ಸೆಕೆಂಡ್ಗಳಿಗೆ ವಾಹನಗಳು ಮುಕ್ತವಾಗಿ ಸಂಚರಿಸಬಹುದಾಗಿದೆ. ಈಗಾಗಲೇ ಬೆಂಗಳೂರು ಹಾಗೂ ಶಿವಮೊಗ್ಗದ ರಸ್ತೆಗಳಲ್ಲಿ ಪ್ರಾಯೋಗಿಕ ಅನುಷ್ಠಾನ ಮಾಡಿ ಯಶಸ್ಸು ಕಂಡಿದ್ದೇವೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ವಿವರಿಸಿದರು.

ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಉಪಾಧ್ಯಕ್ಷ ಸಿ.ಆರ್. ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಪಿ. ನಾರಾಯಣ್, ನಿರ್ದೇಶಕ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಮಧುರಾವ್, ಸೀತಾಲಕ್ಷ್ಮೀ, ಅನಂತದತ್ತಾ, ಸುಧೀರ್, ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲ ವೈ.ವಿಜಯ ಕುಮಾರ್, ಡೀನ್ಗಳಾದ ಪಿ.ಮಂಜುನಾಥ, ಎಸ್.ವಿ. ಸತ್ಯನಾರಾಯಣ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕಾರ್ತಿಕ್, ಸಹಾಯಕ ಪ್ರಾಧ್ಯಾಪಕ ಅರುಣ್, ಎಸ್.ಟಿ.ಅರವಿಂದ್, ಎಚ್.ಎಂ.ಮಲ್ಲಪ್ಪ, ಕಿಶೋರ್ ಶೀರನಾಳಿ, ರವೀಂದ್ರ ಉಪಸ್ಥಿತರಿದ್ದರು.

ಪೇಟೆಂಟ್ಗೆ ಪ್ರಸ್ತಾವ

‘ನಾಲ್ಕು ವರ್ಷಗಳ ನಿರಂತರ ಸಂಶೋಧನೆ ಪ್ರಯತ್ನದ ನಂತರ ಉತ್ಪನ್ನದ ಪೇಟೆಂಟ್ ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ. ಮುಂದಿನ ವರ್ಷದೊಳಗೆ ಪೇಟೆಂಟ್ ದೊರೆಯುವ ನಿರೀಕ್ಷೆ ಇದೆ’ ಎಂದು ಕಾಲೇಜಿನ ಪ್ರಾಚಾರ್ಯ ವೈ.ವಿಜಯ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.