ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಭರದಿಂದ ನಡೆಯುತ್ತಿರುವ ಕಾರಣ ಜಲಪಾತ ಪ್ರದೇಶದಲ್ಲಿ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವಿಲ್ಲದೇ ಪ್ರವಾಸಿಗರು ಪರದಾಡುತ್ತಿರುವುದು ಕಂಡು ಬರುತ್ತಿದೆ.

ಜಲಪಾತಕ್ಕೆ ತೆರಳುವ ಮುಖ್ಯದ್ವಾರದ ಒಳಭಾಗಕ್ಕೆ ಕಾರ್, ಜೀಪ್, ಟೆಂಪೋ ಟ್ರಾವೆಲರ್ ಮತ್ತು ದ್ವಿಚಕ್ರ ವಾಹನಗಳನ್ನು ಬಿಡಲಾಗುತ್ತಿದೆ. ಅಲ್ಲಗೆ ಬಸ್ಗಳಿಗೆ ತೆರಳಲು ಪ್ರವೇಶವಿಲ್ಲ. ಮೈಸೂರು ಬಂಗಲೆಯ ಪಕ್ಕದಲ್ಲಿದ್ದ ಪಾರ್ಕಿಂಗ್ ಪ್ರದೇಶ ಬದಲಾದ ಯೋಜನೆಯಲ್ಲಿ ಕಟ್ಟಡವಾಗಿ ರೂಪುಗೊಳ್ಳುತ್ತಿದೆ. ಹೀಗಾಗಿ ಮಯೂರ ಹೋಟೆಲ್ ಬಳಿ 70 ರಿಂದ 80 ವಾಹನಗಳನ್ನಷ್ಟೇ ಮಾತ್ರ ಪಾರ್ಕಿಂಗ್ ಮಾಡಲು ಅವಕಾಶವಿದೆ. ರಾಣಿ ಜಲಪಾತದ ಬಳಿಯೂ ಪಾರ್ಕಿಂಗ್ ಪ್ರದೇಶದ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಪ್ರವಾಸಿಗರು ವಾಹನಗಳ ನಿಲುಗಡೆಗೆ ಸಮಸ್ಯೆ ಎದುರಿಸುತ್ತಿದ್ದಾರೆ.

ವಾಹನಗಳೊಂದಿಗೆ ಪ್ರವೇಶ ಪಡೆಯುವ ಪ್ರವಾಸಿಗರಿಗೆ ಜೋಗ ಜಲಪಾತದ ದರ್ಶನಕ್ಕೆ ಮಯೂರ ಹೋಟೆಲ್ ಬಳಿಯಿಂದ ಮಾತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಜೋಗದ ಗುಂಡಿಯ ಮಾರ್ಗ, ಮೈಸೂರು ಬಂಗಲೆಯ ಎಡದಂಡೆ ಮತ್ತು ಬಲದಂಡೆ ಪ್ರದೇಶಗಳಲ್ಲಿ ವೀಕ್ಷಣಾ ಗೋಪುರದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಅಲ್ಲಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ. ಜೋಗ ಜಲಪಾತದ ಜಲಸಿರಿಯ ವೈಭವವನ್ನು ಸವಿಯಲು ಪ್ರಮುಖ ವೀಕ್ಷಣಾ ಸ್ಥಳವಾದ ಮೈಸೂರು ಬಂಗಲೆ ಮುಂಭಾಗದಿಂದ ವೀಕ್ಷಣೆಗೆ ಅವಕಾಶ ಲಭ್ಯವಾಗದೇ ತೀರಾ ನಿರಾಸೆಯಿಂದ ಪ್ರವಾಸಿಗರು ಹಿಂದಿರುಗುತ್ತಿದ್ದಾರೆ. ಪಾರ್ಕಿಂಗ್ ಸಮಸ್ಯೆಯಿಂದ ಕೂಡಲೇ ಇಲ್ಲಿಂದ ನಿರ್ಗಮಿಸಬೇಕಾದ ಸ್ಥಿತಿ ಇದೆ.

ಜೋಗ ಜಲಪಾತ ಪ್ರದೇಶದಲ್ಲಿ ಒಂದಿಷ್ಟು ಸಮಯ ಕಳೆಯಲು ಅವಕಾಶ ಇಲ್ಲದ ಕಾರಣ ಪ್ರವಾಸಿಗರು ಸಿಗಂದೂರು ಚೌಡಮ್ಮ ದೇವಿಯ ದರ್ಶನ, ವಡನ್ ಬೈಲು ಬಳೆ ಪದ್ಮಾವತಿ ದೇವರ ದರ್ಶನ, ಜೋಗದ ದ್ವಿಮುಖ ಚಾಮುಂಡೇಶ್ವರಿ ದೇವಸ್ಥಾನದ ದರ್ಶನಕ್ಕೆ ತೆರಳುತ್ತಿದ್ದಾರೆ ಎಂದು ಸ್ಥಳೀಯ ಪ್ರವಾಸಿ ಗೈಡ್ಗಳು ಅಭಿಪ್ರಾಯಪಡುತ್ತಾರೆ.

ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವ ಮುಂಚಿನ ದಿನಗಳಲ್ಲಿ ಜೋಗಕ್ಕೆ ಆಗಮಿಸುವ ಪ್ರವಾಸಿಗರಲ್ಲಿ ಯುವಕರು ಯುವತಿಯರು ಜೋಗದ ಗುಂಡಿ ಮಾರ್ಗವಾಗಿ 1,400 ಮೆಟ್ಟಿಲುಗಳನ್ನು ಇಳಿದು ಜೋಗದ ಸಿರಿಯನ್ನು ವಿವಿಧ ಕೋನಗಳಲ್ಲಿ ಆಸ್ವಾದಿಸುತ್ತಿದ್ದರು. ಅವರ ಜೊತೆಯಲ್ಲಿ ಬಂದವರು ಮೈಸೂರು ಬಂಗಲೆಯ ಮುಂಭಾಗದಲ್ಲಿ ಸಂಜೆಯವರೆಗೂ ಕುಳಿತು ಜಲಪಾತವನ್ನು ವೀಕ್ಷಣೆ ಮಾಡುತ್ತಿದ್ದರು. ಆದರೆ ಅಂತರರಾಷ್ಟ್ರೀಯ ದರ್ಜೆಯ ಪ್ರವಾಸಿ ತಾಣವಾಗಿ ಜೋಗ ರೂಪುಗೊಳ್ಳುವವರೆಗೂ ಪ್ರತಿಯೊಬ್ಬರು ಕಾಯಬೇಕಾದ ಅನಿವಾರ್ಯತೆ ಇದೆ.

‘ಕಳೆದ 2 ವರ್ಷಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಜೋಗ ನಿರ್ವಹಣಾ ಪ್ರಾಧಿಕಾರ ಕಾಮಗಾರಿಗಳಿಗೆ ವೇಗ ನೀಡಬೇಕು. ಪ್ರವಾಸಿಗರಿಗೆ ಮಳೆಗಾಲದಲ್ಲಿ ಮಾತ್ರ ದೊರಕುವ ಪ್ರಕೃತಿದತ್ತವಾದ ಸೊಬಗನ್ನು ವೀಕ್ಷಿಸಲು ಆಯ್ದ ವೀಕ್ಷಣಾ ತಾಣಗಳ ಕಾಮಗಾರಿಗೆ ಆದ್ಯತೆ ನೀಡಬೇಕು’ ಎಂದು ಜೋಗಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಆಗ್ರಹಿಸಿದ್ದಾರೆ.

ಜೋಗ ಜಲಪಾತ ಪ್ರದೇಶಕ್ಕೆ ಶನಿವಾರ 3000 ಪ್ರವಾಸಿಗರು ಆಗಮಿಸಿದ್ದರು. 600 ಪ್ರವಾಸಿ ವಾಹನಗಳ ಮೂಲಕ ಜನರು ಮುಖ್ಯದ್ವಾರದ ಮೂಲಕ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ
ಶ್ರೀನಿವಾಸ ಪ್ರಾಧಿಕಾರದ ಮೇಲ್ವಿಚಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.