ಭದ್ರಾವತಿ: ಕಾಡುಕೋಣ ಹತ್ಯೆ ಮಾಡಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಅರಣ್ಯ ವಿಭಾಗದ ತಂಡ ಯಶಸ್ವಿಯಾಗಿದೆ.

ತಾಲ್ಲೂಕಿನ ಶ್ರೀನಿವಾಸಪುರ ನಿವಾಸಿ ಶಿವರಾಮ ಮತ್ತು ಉಕ್ಕುಂದ ಗ್ರಾಮದ ನಿವಾಸಿ ರಂಗಸ್ವಾಮಿ ಸೇರಿದಂತೆ ಮೂರು ಜನರ ವಿರುದ್ಧ ಅ.17ರಂದು ಪ್ರಕರಣ ದಾಖಲಾಗಿತ್ತು. ಈ ಪೈಕಿ ಶಿವರಾಮ ಮತ್ತು ರಂಗಸ್ವಾಮಿ ತಲೆಮರೆಸಿಕೊಂಡಿದ್ದರು. ವಲಯ ಅರಣ್ಯ ಅಧಿಕಾರಿ ಬಿ.ಎಚ್. ದುಗ್ಗಪ್ಪ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಉಪವಲಯ ಅರಣ್ಯ ಅಧಿಕಾರಿಗಳಾದ ಅಣ್ಣನಾಯಕ್, ಕೃಷ್ಣ ರೆಡ್ಡಿ, ಶೇಖರ್ ಚೌಗುಲೆ, ಹನುಮಂತ ನಾಯಕ್, ಸಿಬ್ಬಂದಿ ಹನುಮಂತರಾಯ, ಗಸ್ತು ಅರಣ್ಯಪಾಲಕರಾದ ಎಸ್. ಕಾಂತೇಶ್ ನಾಯಕ್, ವಿನೋದ್ ಬಿರಾದರ್, ಬಾಲರಾಜ್, ಪಿ. ನಾಗೇಂದ್ರ. ಸಿ.ಚಂದ್ರಶೇಖರ್ ಹಾಗೂ ಅರಣ್ಯ ವೀಕ್ಷಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.