ಸಾಗರ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಕೊಂಚ ತಗ್ಗಿದ್ದ ಮಳೆಯ ಪ್ರಮಾಣ ಬುಧವಾರ ರಾತ್ರಿಯಿಂದ ಮತ್ತೆ ಹೆಚ್ಚಾಗಿದ್ದು ಗುರುವಾರವೂ ವರುಣನ ಆರ್ಭಟ ಮುಂದುವರೆದಿದೆ. ಮಳೆಯ ಜೊತೆಗೆ ಜೋರಾಗಿ ಗಾಳಿಯೂ ಬೀಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನಲ್ಲಿ ಜುಲೈ 24 ರಂದು 22.1 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, ಈ ಅವಧಿಯಲ್ಲಿ 58.9 ಮಿ.ಮೀ. ಮಳೆಯಾಗಿದ್ದು, ಶೇ 167ರಷ್ಟು ಹೆಚ್ಚುವರಿ ಮಳೆ ಸುರಿದಿದೆ. ಜುಲೈ 18 ರಿಂದ 24ರವರೆಗೆ ವಾಡಿಕೆಯಂತೆ 196.9 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿ 558.9 ಮಿ.ಮೀ. ಮಳೆಯಾಗುವುದರೊಂದಿಗೆ ಶೇ 194 ರಷ್ಟು ಹೆಚ್ಚು ಮಳೆ ಸುರಿದಿದೆ.

ತಾಲ್ಲೂಕಿನಲ್ಲಿ ಜು.1 ರಿಂದ 24ರವರೆಗಿನ ವಾಡಿಕೆ ಮಳೆಯ ಪ್ರಮಾಣ 1,149.4 ಮಿ.ಮೀ. ಆಗಿದೆ. ಆದರೆ ಈ ಅವಧಿಯಲ್ಲಿ 2,040 ಮಿ.ಮೀ. ಮಳೆಯಾಗಿದೆ. ಜ. 1ರಿಂದ ಜುಲೈ 24ರವರೆಗೆ ವಾಡಿಕೆ ಮಳೆ ಪ್ರಮಾಣ 1,270.2 ಮಿ.ಮೀ. ಆಗಿದ್ದು, ಈ ಅವಧಿಯಲ್ಲಿ 2,231.9 ಮಿ.ಮೀ. ಮಳೆಯಾಗಿದ್ದು ಇದು ಶ 76ರಷ್ಟು ಹೆಚ್ಚಿನ ಮಳೆಯ ಪ್ರಮಾಣವಾಗಿದೆ.

ಮಳೆಯಿಂದಾಗಿ ವರದಾ ನದಿಯ ನೀರು ಉಕ್ಕಿ ಹರಿಯುತ್ತಿದ್ದು ತಾಳಗುಪ್ಪ ಹೋಬಳಿಯ ಹಲವು ಹಳ್ಳಿಗಳಲ್ಲಿ ಭತ್ತದ ಗದ್ದೆ ಜಲಾವೃತಗೊಂಡಿದ್ದು ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಬಿರುಸಿನ ಮಳೆಯಿಂದ ತಾಲ್ಲೂಕಿನ ಹಲವೆಡೆ ಗ್ರಾಮೀಣ ಭಾಗದ ರಸ್ತೆಗಳಿಗೆ ಧಕ್ಕೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.