ಹೊಳೆಹೊನ್ನುರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯು ಇಲ್ಲಿನ ವೃತ್ತದಲ್ಲಿ ಪ್ರತಿಷ್ಠಾಪನೆಗೊಂಡಿದ್ದರೂ ಎರಡು ತಿಂಗಳು ಕಳೆದರೂ ಪ್ರತಿಮೆ ಅನಾವರಣಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಣ್ಣಪುಟ್ಟ ಕಾಮಗಾರಿಗಳು ವಿಳಂಬವಾಗುತ್ತಿರುವುದು ಗಾಂಧೀಜಿ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಪ್ರತಿಮೆಯನ್ನು ಹೊನ್ನೂರಮ್ಮ ದೇವಿ ಯುವಕರ ಸಂಘ ಹಾಗೂ ಹೊನ್ನೂರಮ್ಮ ಬೀದಿಯ ನಿವಾಸಿಗಳ ಆರ್ಥಿಕ ಸಹಾಯದೊಂದಿಗೆ ಅಂದಾಜು ₹ 3 ಲಕ್ಷ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಪಟ್ಟಣ ಪಂಚಾಯಿತಿಯಿಂದ ₹ 2 ಲಕ್ಷ ಅನುದಾನ ಘೋಷಣೆಯಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಪ್ರತಿಮೆ ಇರಿಸಲು ಇರುವ ಮಂಟಪ ಸುಣ್ಣ–ಬಣ್ಣ ಕಂಡಿಲ್ಲ. ಸುತ್ತಮುತ್ತಲಿನ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಅನಾವರಣ ಕಾರ್ಯದ ವಿಳಂಬಕ್ಕೆ ಕಾರಣವಾಗಿದೆ.

ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿ ಗ್ರಾಮದ ಯುವಕರಾದ ವಿನಯ್ ಕುಮಾರ್ ಹಾಗೂ ಗಣೇಶ್ ಅವರು ಕಳೆದ ವರ್ಷ ಈ ಜಾಗದಲ್ಲಿದ್ದ ಗಾಂಧಿ ಪ್ರತಿಮೆಯನ್ನು ದ್ವಂಸಗೊಳಿಸಿದ್ದರು. ಆಗ ಪಟ್ಟಣಕ್ಕೆ ಬಂದ ಜನಪ್ರತಿನಿಧಿಗಳು ಕೂಡಲೇ ಗಾಂಧಿ ಪ್ರತಿಮೆ ಸಿದ್ಧಪಡಿಸಿ ಅನಾವರಣಗೊಳಿಸಲಾಗುವುದು ಎಂಬ ಭರವಸೆ ನೀಡಿದ್ದರು. ಆದರೆ, ಬಳಿಕ ಜನಪ್ರತಿನಿಧಿಗಳು ಹಲವಾರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರೂ ಈ ಬಗ್ಗೆ ಚಕಾರವೆತ್ತಿರಲಿಲ್ಲ. ಸಾರ್ವಜನಿಕರು ಹಲವಾರು ಬಾರಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿ ಮಾಡಿದರೂ ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪ್ರತಿಮೆ ಧ್ವಂಸಗೊಂಡ ವೇಳೆ ಇಲ್ಲಿನ ನಿವಾಸಿಗಳು ಪ್ರತಿಮೆ ಪುನರ್ ಅಳವಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದರು. ಆದರೆ, ಈ ಬಗ್ಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಗಮನ ಹರಿಸಲಿಲ್ಲ. ಯಾರಿಂದಲೂ ಸಹಾಯ ಸಿಗದ ಕಾರಣ ಹೊನ್ನೂರಮ್ಮ ಯುವಕರ ಸಂಘದ ಯುವಕರು ಮುಂದೆ ನಿಂತು ಗಾಂಧಿ ಪ್ರತಿಮೆ ನಿರ್ಮಾಣಕ್ಕೆ ಕೈಹಾಕಿ ಯಶಸ್ವಿಯಾದರು.

ಪಟ್ಟಣ ಪಂಚಾಯಿತಿಯಿಂದ ಬಿಡುಗಡೆ ಆಗಬೇಕಿರುವ ₹ 2 ಲಕ್ಷ ಅನುದಾನ ಮಂಜೂರು ಮಾಡುವಲ್ಲಿ ಎಂಜಿನಿಯರ್ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಗಾಂಧಿ ಪ್ರತಿಮೆ ಅನಾವರಣ ಕಾರ್ಯ ವಿಳಂಬವಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದೇ ಪುತ್ಥಳಿಯನ್ನು ಅನಾವರಣಗೊಳಿಸಲು ಹೊನ್ನೂರಮ್ಮ ಸಂಘ ಸಿದ್ಧತೆ ಮಾಡಿಕೊಂಡಿತ್ತು.

ದರ್ಶನಕ್ಕೆ ಸಿದ್ಧವಾಗಿರುವ ಪ್ರತಿಮೆಯ ಅನಾವರಣ ದಿನಾಂಕ ನಿಗದಿಮಾಡಲು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಗಾಂಧಿ ಪ್ರತಿಮೆ ಸಿದ್ಧವಾಗಿದ್ದು ಸುಣ್ಣಬಣ್ಣದ ಕಾರ್ಯ ಬಾಕಿ ಇದೆ. ನವೆಂಬರ್ ತಿಂಗಳೊಳಗೆ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅದ್ಧೂರಿಯಾಗಿ ಅನಾವರಣ ಮಾಡಲಾಗುವುದು
–ಸಿ.ಪುನೀತ್ ಕುಮಾರ್ ಕಾರ್ಯದರ್ಶಿ ಹೊನ್ನೂರಮ್ಮ ದೇವಿ ಯುವಕರ ಸಂಘ ಹೊಳೆಹೊನ್ನೂರು

ಪಟ್ಟಣ ಪಂಚಾಯಿತಿಯು ಪಾರ್ಕ್ ವ್ಯವಸ್ಥೆ ಹಾಗೂ ಅದರ ಸುತ್ತಮುತ್ತಲಿನ ಕಾಮಗಾರಿ ಕೈಗೊಳ್ಳದೇ ಇರುವುದರಿಂದ ಅನಾವರಣ ಸಮಾರಂಭ ನಿಗದಿ ಸಾಧ್ಯವಾಗುತ್ತಿಲ್ಲ
–ಅರುಣ್ ಕುಮಾರ್ ಗ್ರಾಮಸ್ಥ

ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇವೆ. ಮುಗಿದ ನಂತರ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸೇರಿ ಗಾಂಧಿ ಪ್ರತಿಮೆ ಅನಾವರಣ ಸಮಾರಂಭ ಏರ್ಪಡಿಸಲಾಗುವುದು
–ನಾಗರಾಜ್ ಕೆ ತಹಶೀಲ್ದಾರ್ ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.