ಶಿವಮೊಗ್ಗ: ಮೊಬೈಲ್ ಹಾಳು ಮಾಡಿದಳು ಎಂದು ಕೋಪಗೊಂಡ ಮಾನಸಿಕ ಅಸ್ವಸ್ಥನೊಬ್ಬ ಐದು ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಲ್ಲಿನ ಗಾಡಿಕೊಪ್ಪದಲ್ಲಿ ಭಾನುವಾರ ನಡೆದಿದೆ.

ರಜನಿ (5)ಮೃತಪಟ್ಟ ಬಾಲಕಿ. ತೀವ್ರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ರಜನಿಯ ತಂದೆ-ತಾಯಿ ಚಿತ್ರದುರ್ಗದವರಾಗಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ. ಮಗಳನ್ನು ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಮಾನಸಿಕ ಅಸ್ವಸ್ಥ ಸಂತೋಷ್ ಬಾಲಕಿಯ ಸೋದರ ಮಾವ. ಮೊಬೈಲ್ ತೆಗೆದುಕೊಳ್ಳುವ ವಿಷಯಕ್ಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದನು. ಜಗಳದ ನಂತರ ತಂದೆ ಸಂತೋಷನಿಗೆ ಮೊಬೈಲ್ ಕೊಡಿಸಿದ್ದರು. ಆದರೆ ಈ ಮೊಬೈಲನ್ನು ಬಾಲಕಿ ಒಂದು ಬಾರಿ ಹಾಳು ಮಾಡಿದ್ದಳು ಎಂಬ ಕೋಪ ಆತನಿಗೆ ಇತ್ತು. ಹೀಗಾಗಿ ರಜನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತುಂಗಾನಗರ ಪೊಲೀಸರು ಆರೋಪಿ ಸಂತೋಷ್ನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.