ಸಾಗರ: ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನ. 21ರಂದು ಸಂಜೆ 4ಕ್ಕೆ ‘ಸುಭದ್ರ ಕಲ್ಯಾಣ’ ಯಕ್ಷಗಾನ ಪ್ರಸಂಗ ಆಯೋಜಿಸಲಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್ ತಿಳಿಸಿದರು.

ದೊಡ್ಡೇರಿ ಮಹಾಬಲಗಿರಿ ರಾವ್, ಡಿ.ಎಂ. ಸಾಗರ್, ರಜನಿ ದೊಡ್ಡೇರಿ ಕುಟುಂಬಸ್ಥರು, ಅಭಿನಯ ಸಾಗರ ಹಾಗೂ ಜೋಶಿ ಫೌಂಡೇಷನ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಗಣಪತಿ ಭಾಗವತ್, ಲಕ್ಷ್ಮಿನಾರಾಯಣ ಸಂಪ, ಮುಮ್ಮೇಳದಲ್ಲಿ ಕೃಷ್ಣಯಾಜಿ ಬಳ್ಕೂರು, ಗಣಪತಿ ಹೆಗಡೆ ತೋಟಿಮನೆ, ಶ್ರೀಧರ ಭಟ್ ಕಾಸರಕೋಡು, ಸಂಜಯ ಬೆಳೆಯೂರು, ಅಶ್ವಿನಿ ಕೊಂಡದಕುಳಿ ಇನ್ನಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾತ್ರಿ 7ಕ್ಕೆ ಡಿ.ಎಂ.ಸಾಗರ್ ಬರೆದಿರುವ ‘ವಿಲಕ್ಷಣ ಜಲಜಾಲ’ ಕೃತಿಯನ್ನು ನಿವೃತ್ತ ಮುಖ್ಯಶಿಕ್ಷಕ ದೊಡ್ಡೇರಿ ಮಹಾಬಲಗಿರಿ ರಾವ್ ಬಿಡುಗಡೆ ಮಾಡಲಿದ್ದು, ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಕೃತಿಯ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಮನುಷ್ಯನ ಬದುಕನ್ನು ನೀರು ಯಾವ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ. ಪ್ರಸ್ತುತ ದಿನದಲ್ಲಿ ಜಲ ಸಂರಕ್ಷಣೆ ಎಷ್ಟು ಮುಖ್ಯ ಎಂಬ ವಿಷಯವನ್ನು ‘ವಿಲಕ್ಷಣ ಜಲಜಾಲ’ ಕೃತಿ ಕೇಂದ್ರೀಕರಿಸಿದೆ ಎಂದು ಲೇಖಕ ಡಿ.ಎಂ. ಸಾಗರ್ ಹೇಳಿದರು.

ಪ್ರಮುಖರಾದ ಮಾ.ಸ. ನಂಜುಂಡಸ್ವಾಮಿ, ನಾರಾಯಣಮೂರ್ತಿ ಕಾನುಗೋಡು, ಬಿ.ಎಚ್. ಲಿಂಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.