ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ | ರಸ್ತೆಯಲ್ಲೇ ಹರಿಯುವ ಮಳೆ ನೀರು: ಪರದಾಟ

ಕಿತ್ತುಹೋದ ಡಾಂಬರು, ತಗ್ಗು, ಗುಂಡಿಗಳ ಸಾಲು; ವಿದ್ಯಾರ್ಥಿಗಳ ಪರದಾಟ
Published : 25 ಜುಲೈ 2024, 7:05 IST
Last Updated : 25 ಜುಲೈ 2024, 7:05 IST
ಫಾಲೋ ಮಾಡಿ
Comments
ಸೊರಬ ತಾಲ್ಲೂಕಿನ ತವನಂದಿ ಜಡೆ ಮುಖ್ಯ ರಸ್ತೆ
ಸೊರಬ ತಾಲ್ಲೂಕಿನ ತವನಂದಿ ಜಡೆ ಮುಖ್ಯ ರಸ್ತೆ
ನೂರ್ ಅಹಮದ್
ನೂರ್ ಅಹಮದ್
ಜಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಡಾಂಬರು ಕಿತ್ತು ಹಲವು ವರ್ಷಗಳು‌ ಕಳೆದಿವೆ. ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲ. ಪಾಲಕರಿಗೆ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳಿಹಿಸಲು ಭಯವಿದೆ
ನೂರ್ ಅಹಮದ್ ಸ್ಥಳೀಯ
ಸೋಮಶೇಖರ್
ಸೋಮಶೇಖರ್
ಜಮೀನಿನ ದಾಖಲೆ ಪಡೆಯಲು ಸೊರಬಕ್ಕೆ 35 ಕಿ.ಮೀ. ದೂರ ಬರಬೇಕಿದೆ. ರಸ್ತೆ ಹಾಳಾಗಿರುವುದರಿಂದ ರೈತರಿಗೆ ಒಂದು ದಿನಸ ಕೆಲಸ ಹಾಳಾಗುತ್ತಿದೆ. ಗುಂಡಿ ತಪ್ಪಿಸಲು ಹೋಗಿ ಹಲವಾರು ಜನರಿಗೆ ಬಿದ್ದು ಗಾಯಗಾಳಾಗಿವೆ. ಸಂಬಂಧಪಟ್ಟವರು ಗಮನ ಹರಿಸಬೇಕು
ಸೋಮಶೇಖರ್ ತಲಗಡ್ಡೆ
ಚಂದನಾ
ಚಂದನಾ
ಗುಂಡಿ ಬಿದ್ದ ರಸ್ತೆಯಲ್ಲಿ ಬಸ್ ತಡವಾಗಿ ಚಲಿಸುವುದರಿಂದ ಕಾಲೇಜಿಗೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ
ಚಂದನಾ ಪದವಿ ವಿದ್ಯಾರ್ಥಿ
ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಬೇಕು
ತಾಲ್ಲೂಕು ಕೇಂದ್ರದಿಂದ ಬಹುದೂರದ ಜಡೆ ಭಾಗದ ಹಳ್ಳಿಗಳಿಗೆ ಸೊರಬದಿಂದ ಇಲ್ಲಿಯವರೆಗೆ ಯಾವುದೇ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ಈ ಭಾಗದಿಂದ ವಿದ್ಯಾರ್ಥಿಗಳು ಪಿಯು ಹಾಗೂ ಪದವಿ ವ್ಯಾಸಂಗಕ್ಕೆ ಸೊರಬಕ್ಕೆ ಬರಬೇಕು. ಕೋವಿಡ್ ನಂತರ ನಷ್ಟ ಉಂಟಾಗಿದ್ದರಿಂದ ಖಾಸಗಿ ಬಸ್‌ಗಳ ಓಡಾಟ ಕಡಿಮೆ ಆಗಿದೆ. ಇರುವ ಒಂದೆರೆಡು ಬಸ್‌ಗಳನ್ನೇ ಅವಲಂಬಿಸಬೇಕಿದೆ. ಬಸ್‌ನಲ್ಲಿ ನೂಕುನುಗ್ಗಲು ಉಂಟಾಗುವುದರಿಂದ ಕೆಲವು ವಿದ್ಯಾರ್ಥಿಗಳು ತರಗತಿ ತಪ್ಪಿಸುತ್ತಾರೆ. ರೈತರು ಬಡವರು ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿರುವ ಈ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಡೆ ಭಾಗದ ಆಲಹಳ್ಳಿ ಬಿಳಗಲಿ ತಲಗಡ್ಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT