ಶಿಕಾರಿಪುರದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖವಾದ ದೃಶ್ಯ.
ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖಾಸಗಿ ಬಸ್ ವ್ಯವಹಾರ ನಡೆಸುತ್ತಿದ್ದೇವೆ. ‘ಶಕ್ತಿ’ ಯೋಜನೆಯಿಂದ ಖಾಸಗಿ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇದೇ ರೀತಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾದರೇ ಬಸ್ ಓಡಿಸುವುದು ಕಷ್ಟವಾಗುತ್ತದೆ. ಖಾಸಗಿ ಬಸ್ ನಂಬಿಕೊಂಡಿರುವ ಖಾಸಗಿ ಬಸ್ ಮಾಲೀಕರು ಚಾಲಕ ಹಾಗೂ ಏಜೆಂಟರ ಕುಟುಂಬಗಳ ಬೀದಿ ಪಾಲಾಗುತ್ತವೆ.
–ಹರೀಶ್, ಖಾಸಗಿ ಬಸ್ ಮಾಲೀಕ
‘ಶಕ್ತಿ’ ಯೋಜನೆ ಅನುಸ್ಠಾನಕ್ಕೆ ಮೊದಲು ಖಾಸಗಿ ಬಸ್ ನಿಲ್ದಾಣದಲ್ಲಿ ಜನಸಂದಣಿ ಇರುತ್ತಿತ್ತು. ನಮ್ಮ ಅಂಗಡಿಗಳಿಗೆ ಬಂದು ಪ್ರಯಾಣಿಕರು ವ್ಯಾಪಾರ ನಡೆಸುತ್ತಿದ್ದರು. ಶಕ್ತಿ ಯೋಜನೆ ಅನುಷ್ಠಾನವಾದ ನಂತರ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಅಂಗಡಿಗಳಲ್ಲಿ ವ್ಯಾಪಾರ ಕೂಡ ಕುಸಿತವಾಗಿದೆ. ಈಗೆ ವ್ಯಾಪಾರ ಕಡಿಮೆಯಾದರೇ ನಾವು ಸಾವಿರಾರು ರೂಪಾಯಿ ಪುರಸಭೆಗೆ ಕಟ್ಟಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ.