ಶಿವಮೊಗ್ಗ: ಹಣಕಾಸು ವರ್ಷಾರಂಭವೇ ಆಸ್ತಿ ತೆರಿಗೆ ಪಾವತಿಸಿದವರಿಗೆ ಮಹಾನಗರ ಪಾಲಿಕೆಯಿಂದ ಶೇ 5ರಷ್ಟು ರಿಯಾಯಿತಿ ನೀಡಿದ ಪರಿಣಾಮ ಏಪ್ರಿಲ್‌ನಲ್ಲಿ ₹ 28.82 ಕೋಟಿ ತೆರಿಗೆ ಸಂಗ್ರಹವಾಗಿದೆ. ಸಾರ್ವಜನಿಕರು ಒಂದೊಮ್ಮೆ ಜುಲೈ ನಂತರ ತೆರಿಗೆ ಪಾವತಿ ಮಾಡಿದರೆ ಶೇ 2ರಷ್ಟು ದಂಡ ವಿಧಿಸಲುಪಾಲಿಕೆ ನಿರ್ಧರಿಸಿದೆ.

ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿ ಮಾಡಿದವರಿಗೆ ಮಾತ್ರ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಇದನ್ನು

ಸದುಪಯೋಗಪಡಿಸಿಕೊಂಡ ಶಿವಮೊಗ್ಗದ ಅನೇಕ ನಿವಾಸಿಗಳು ಏಪ್ರಿಲ್‌ನಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದ್ದಾರೆ. ಹೀಗಾಗಿಯೇ ಪಾಲಿಕೆಗೆ ಭರಪೂರ ಆದಾಯ ಹರಿದು ಬಂದಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವ 1.70 ಲಕ್ಷ ಜನರಿದ್ದಾರೆ. ಈ ಪೈಕಿ ಈಗಾಗಲೇ ಮೊದಲ ತಿಂಗಳಲ್ಲಿಯೇ 65,000 ಜನ ತೆರಿಗೆ ಕಟ್ಟಿದ್ದಾರೆ.

ಇದೀಗ ಮೇ ಮತ್ತು

ಜೂನ್ ತಿಂಗಳಲ್ಲಿ ತೆರಿಗೆ ಪಾವತಿ ಮಾಡಿದರೆ ಯಾವುದೇ ರಿಯಾಯಿತಿ ಇರುವುದಿಲ್ಲ.

ಜುಲೈ ನಂತರ ತೆರಿಗೆ ಪಾವತಿ ಮಾಡಿದರೇ ಪಾಲಿಕೆಯಿಂದ ಶೇ 2ರಷ್ಟು ದಂಡವನ್ನು ಪ್ರತಿ ತಿಂಗಳು ವಿಧಿಸಲಾಗುತ್ತದೆ. ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಜೂನ್ ತಿಂಗಳೊಳಗೆ ತೆರಿಗೆ ಕಟ್ಟಬೇಕು.

ನಂತರ ತೆರಿಗೆ ಪಾವತಿಸಿದಲ್ಲಿ ದಂಡ ಕಟ್ಟುವುದು |ಅನಿವಾರ್ಯವಾಗಲಿದೆ.

₹ 47 ಕೋಟಿ ಸಂಗ್ರಹ ಗುರಿ: ಮಹಾನಗರ ಪಾಲಿಕೆಯ

2024–25ನೇ ಸಾಲಿನಲ್ಲಿ ₹ 47 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ಇದೆ. ಅದರಲ್ಲೀಗ ಆರ್ಥಿಕ ವರ್ಷಾರಂಭದ ಮೊದಲ ತಿಂಗಳಲ್ಲಿಯೇ ಅರ್ಧಕ್ಕಿಂತರ ಹೆಚ್ಚು ಸಂದಾಯವಾಗಿದೆ.

ಉಳಿದ ತೆರಿಗೆಯನ್ನು ಈ ವರ್ಷವೀಡಿ ಸಂಗ್ರಹಿಸಲಾಗುತ್ತದೆ.

ಅಲ್ಲದೇ ತೆರಿಗೆ ನಿರಾಕರಿಸುವವರಿಗೆ ಪಾಲಿಕೆಯಿಂದ ನೋಟಿಸ್ ನೀಡಲಾಗುತ್ತಿದೆ.ಮನೆ, ವಾಣಿಜ್ಯ ಮಳಿಗೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಆದಾಯ ತರುವಂತಹ ಯಾವುದೇ ಆಸ್ತಿ ಇದ್ದರೂ ಅಂಥವರು ತೆರಿಗೆ ಪಾವತಿ ಮಾಡಬೇಕಾಗುತ್ತದೆ.ಅಂತೆಯೇ ಕಂದಾಯ ವಿಭಾಗದ ಮೂವರು ಸಿಬ್ಬಂದಿ ನಿತ್ಯ ತೆರಿಗೆ ಸಂಗ್ರಹದಲ್ಲಿಯೇ ನಿರತರಾಗಿದ್ದಾರೆ. ಆಸ್ತಿ ತೆರಿಗೆ ಕುರಿತು ಪಾಲಿಕೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಫಲಕ ಅಳವಡಿಸಲಾಗಿದೆ. ಅಲ್ಲದೇ ಶೇ 5ರಷ್ಟು ರಿಯಾಯಿತಿ ನೀಡುವ ಕುರಿತು ತಿಳಿವಳಿಕೆ ಮೂಡಿಸಲಾಗಿತ್ತು. ತೆರಿಗೆ ಸಂಗ್ರಹವಾಗಿದೆ. ಉಳಿದ ತೆರಿಗೆಯನ್ನು ಸಂಗ್ರಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯ ಕಂದಾಯ ಅಧಿಕಾರಿ ಡಿ. ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.