ಗಡಿನೇರಲು ರಸ್ತೆಯನ್ನು ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿ ಅನುದಾನ ಬಳಸಿ ಅಭಿವೃದ್ಧಿ ಮಾಡಲಾಗಿದೆ. ಎಂಪಿಎಂ ಮರಗಳ ಕಡಿತಲೆಯಿಂದ ಬಂದ ಆದಾಯದಲ್ಲಿ ಶೇ 5ರಷ್ಟು ಪಂಚಾಯಿತಿಗೆ ನೀಡಬೇಕು. ಆದರೆ ಅರಣ್ಯ ಇಲಾಖೆಯ ಎಂಪಿಎಂ ವಿಭಾಗ ನಿಯಮವನ್ನು ಗಾಳಿಗೆ ತೂರಿ ಪಂಚಾಯಿತಿಯನ್ನು ವಂಚಿಸಿದೆ. ಈಗ ರಸ್ತೆ ಹದಗೆಟ್ಟಿದ್ದು ಗ್ರಾಮಸ್ಥರು ಪಂಚಾಯಿತಿಯನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. – ರಾಘವೇಂದ್ರ ಆಚಾರ್ ಗ್ರಾಮ ಪಂಚಾಯಿತಿ ಸದಸ್ಯ ಪ್ರಸ್ತಾವ ಬಂದರೆ ನೆರವು ಗಡಿನೇರಲು ಗ್ರಾಮದಲ್ಲಿ ನೆಡು ತೋಪು ಕಡಿತಲೆ ಸಂಬಂಧ ಅಲ್ಲಿನ ರಸ್ತೆ ಹಾಳಾಗಿರುವ ಬಗ್ಗೆ ದೂರು ಇದೆ. ಮರು ನೆಡುತೋಪು ನಿರ್ಮಾಣದ ನಂತರ ರಸ್ತೆ ದುರಸ್ತಿ ಮಾಡಲಾಗುವುದು.ನೆಡುತೋಪು ಕಡಿತಲೆ ನಂತರದಲ್ಲಿ ಗ್ರಾಮ ಪಂಚಾಯಿತಿಯಿಂದ ಪ್ರಸ್ತಾವ ಬಂದಲ್ಲಿ ಗ್ರಾಮದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. –ಪಾಸ್ಕಲ್ ರೋಡ್ರಿಗಾಸ್ ಸಹಾಯಕ ಅರಣ್ಯ ಅಧಿಕಾರಿ ಸಾಗರ ವಿಭಾಗ