ಮಳೆ ಹೆಚ್ಚಳಗೊಂಡು ಜೋಳ ಭತ್ತ ಜಲಾವೃತಗೊಂಡಿದೆ. ಹವಾಮಾನ ಬದಲಾವಣೆಯಿಂದ ರೋಗ ಹರಡುತ್ತಿದೆ. ಅಳಿದುಳಿದ ಬೆಳೆ ಉಳಿಸಿಕೊಳ್ಳಲು ಮಾಹಿತಿ ನೀಡಲಾಗಿದೆ. ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ
ಕೆ.ಜಿ.ಕುಮಾರ್ ಸಹಾಯಕ ಕೃಷಿ ಅಧಿಕಾರಿ
ಅಲ್ಪಸ್ವಲ್ಪ ಜಮೀನಿನಲ್ಲಿ ಭತ್ತ ಹಾಗೂ ಜೋಳ ಬೆಳೆಯಲಾಗಿತ್ತು. ಮಳೆಯಿಂದ ಬೆಳೆ ನಾಶವಾಗಿದೆ. ಸರ್ಕಾರ ಬೆಳೆಗೆ ಮಾಡಿದ ಖರ್ಚಿನ ಜೊತೆಗೆ ಸೂಕ್ತ ಪರಿಹಾರ ನೀಡಬೇಕು
ಮಹದೇವಮ್ಮ ಹರೂರು ರೈತ ಮಹಿಳೆ
216 ಮನೆಗಳಿಗೆ ಹಾನಿ
ತಾಲ್ಲೂಕಿನ ವಿವಿಧೆಡೆ ಸುರಿದ ಮಳೆಯಿಂದ ಅಂದಾಜು 216 ಮನೆಗಳಿಗೆ ಹಾನಿಯಾಗಿದೆ. ವರದಾ ಹಾಗೂ ದಂಡಾವತಿ ನದಿ ಪಾತ್ರದ ಚಂದ್ರಗುತ್ತಿ ಮತ್ತು ಜಡೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನರ ಸ್ಥಿತಿ ಅಯೋಮಯವಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ಒಳ ಹರಿವು ಹೆಚ್ಚಳವಾಗುತ್ತಿರುವುದರಿಂದ ನದಿ ಸಮೀಪದ ಗ್ರಾಮಗಳ ಮನೆಯ ಗೋಡೆಗಳು ತೇವಾಂಶಗೊಂಡು ವಾಸಿಸಲು ಯೋಗ್ಯವಾಗಿಲ್ಲ. ಇನ್ನೊಂದೆಡೆ ರೈತರ ಬೆಳೆಗಳಿಗೆ ಹೆಚ್ಚು ನಷ್ಟವಾಗಿದ್ದು ಕಂದಾಯ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದಾರೆ.