ಶಿವಮೊಗ್ಗ: ಮೊಬೈಲ್ ಫೋನ್ ಕಳ್ಳತನ ಆಗುವುದು ಸಹಜ. ಆದರೆ, ಕಳ್ಳರು ಇಲ್ಲಿ ಅಳವಡಿಸಿದ್ದ ಮೊಬೈಲ್ಫೋನ್ ನೆಟ್ವರ್ಕ್ ಟವರ್ ಕಳವು ಮಾಡಿದ್ದಾರೆ.

ಶಿವಮೊಗ್ಗದ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆ 2008ರಲ್ಲಿ ಟವರ್ ಅಳವಡಿಸಿ ನಿರ್ವಹಣೆ ಮಾಡುತ್ತಿತ್ತು. ಕೋವಿಡ್ ನಂತರ ಆ ಟವರ್ನ ನಿರ್ವಹಣೆ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಈಚೆಗೆ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಟವರ್ ಇರಲಿಲ್ಲ. ಈ ಬಗ್ಗೆ ಅವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳವು ಆಗಿರುವ ಮೊಬೈಲ್ಫೋನ್ ಟವರ್ನ ಬಿಡಿಭಾಗಗಳ ಅಂದಾಜು ಮೌಲ್ಯ ₹ 46.30 ಲಕ್ಷ ಎಂದು ಟೆಲಿಕಾಂ ಸಂಸ್ಥೆಯ ಸಿಬ್ಬಂದಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತುಂಗಾ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.