ಶಿವಮೊಗ್ಗದ ವಿನೋಬನಗರದಲ್ಲಿರುವ ಹಿರಿಯ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಯಲ್ಲಿ ಸೀಮಿತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಡಳಿತ ಸರ್ಕಾರಿ ನಿವೇಶನ ಗುರುತಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದೆ. ಉತ್ತರಕ್ಕಾಗಿ ಕಾಯುತ್ತಿದ್ದೇವೆ.
ಗಿರೀಶ ಎನ್.ಬಿಸ್ಟನಗೌಡರ್ ಜಿಲ್ಲಾ ನೋಂದಣಾಧಿಕಾರಿ
ಕಚೇರಿಗೆ ಬರುವ ಜನರಿಗೆ ಸಮಸ್ಯೆ ಎದುರಾಗದಂತೆ ತ್ವರಿತಗತಿಯಲ್ಲಿ ಸೇವೆ ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರು ಹಾಗೂ ವೃದ್ಧರಿಗೆ ಅನುವಾಗಲು ಗಾಲಿ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿ.ಧನಂಜಯ್ ಹಿರಿಯ ಉಪನೋಂದಣಾಧಿಕಾರಿ
ಕಚೇರಿ ಸ್ಥಳಾಂತರಕ್ಕೆ ಅಪಸ್ವರ
ನಗರದ ಹಿರಿಯ ಉಪನೋಂದಣಾಧಿಕಾರಿ ಬಳಿಯಲ್ಲಿ ಸೂಡ ಕಚೇರಿ ಹಾಗೂ 10ಕ್ಕೂ ಹೆಚ್ಚು ಪತ್ರ ಬರಹಗಾರರ ಮಳಿಗೆಗಳು ಮತ್ತು ಜೆರಾಕ್ಸ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ನೂರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಚೇರಿ ಸ್ಥಳಾಂತರಗೊಂಡರೆ ಇಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಮಸ್ಯೆ ಉಂಟಾಗಲಿದೆ. ಅವರಿಗೆ ಬದಲಿ ವ್ಯವಸ್ಥೆಗೆ ದಾರಿ ತೋಚದಂತಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಪ್ರಭಾವಿಗಳ ಅಧಿಕಾರ ಬಳಸಿ ಕಚೇರಿ ಸ್ಥಳಾಂತರ ಆಗದಂತೆ ತಡೆಯೊಡ್ಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.