ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಜೊತೆ ನಾ.ಡಿಸೋಜ(ಸಂಗ್ರಹ ಚಿತ್ರ)
ಜನಪರ ಕಾಳಜಿ ಮಾನವಿಯ ಧೋರಣೆ ಜಾತ್ಯಾತೀತ ನಿಲುವು ಡಿಸೋಜ ಅವರ ಬರಹಗಳ ಕೇಂದ್ರವಾಗಿದೆ. ಎಂತಹ ಕಿರಿಯರು ಅವರೊಂದಿಗೆ ಸಹಜವಾಗಿ ಒಡನಾಡಬಹುದು. ಪಂಪ ಪ್ರಶಸ್ತಿ ಗೌರವ ಯೋಗ್ಯವಾದ ವ್ಯಕ್ತಿಗೆ ದೊರಕಿದಂತಾಗಿದೆ
-ಸರ್ಫ್ರಾಜ್ ಚಂದ್ರಗುತ್ತಿ ಲೇಖಕ ಸಾಗರ
ಮಲೆನಾಡಿನ ಸಂಕಟಗಳಿಗೆ ತಮ್ಮ ಬರಹಗಳ ಮೂಲಕ ಸ್ಪಂದಿಸುವ ಕೆಲಸವನ್ನು ನಾಡಿ ಸದಾ ಮಾಡುತ್ತಲೆ ಬಂದಿದ್ದಾರೆ. ಅವರಿಗೆ ಪಂಪ ಪ್ರಶಸ್ತಿ ಈ ಮೊದಲೆ ಬರಬೇಕಿತ್ತು. ಈಗಲಾದರು ಬಂದಿರುವುದು ಸಂತಸದ ವಿಷಯ
-ಅ.ರಾ.ಶ್ರೀನಿವಾಸ್ ಲೇಖಕ ಸಾಗರ
ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತೊಡಗಿರುವ ನಾಡಿ ಅವರಿಗೆ ಪಂಪ ಪ್ರಶಸ್ತಿ ಅವರ ಸಾಧನೆ ಹಾಗೂ ಯೋಗ್ಯತೆಗೆ ದೊರಕಿರುವ ತಕ್ಕ ಮನ್ನಣೆಯಾಗಿದೆ
- ಜಿ.ಎಸ್.ಭಟ್ ಲೇಖಕ ಸಾಗರ
ಪ್ರಶಸ್ತಿ ಬಂದಿರುವ ವಿಷಯ ಕೇಳಿ ಸಂತಸವಾಗಿದೆ. ಕನ್ನಡ ಭಾಷೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲೀಷ್ ವ್ಯಾಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಎಚ್ಚರವನ್ನು ಕನ್ನಡದ ಲೇಖಕರು ಮೂಡಿಸಬೇಕಿದೆ