ಶಿವಮೊಗ್ಗ: ಜಾತಿ, ಧರ್ಮ, ದ್ವೇಷ, ಅಸೂಯೆಯನ್ನು ಮೀರಿ ನಿಂತಿರುವುದೇ ಜನಪದ ಎಂದು ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ‘ಕರ್ನಾಟಕ ಜನಪದ–ಜನಪರ’ ಕುರಿತು ಮಾತನಾಡಿದರು.

ಜನಪದ ಪರಂಪರೆಯೇ ನಿಜವಾದ ಜಾತ್ಯತೀತ ಪರಂಪರೆಯಾಗಿದೆ. ಇದು ಮತ್ತೆ ಹೊಸದಾಗಿ ಹುಟ್ಟಬೇಕಿಲ್ಲ. ಜನಪರವಾಗಿರುವ ಎಲ್ಲ ವಿಷಯಗಳು ಜನಪದದಲ್ಲಿವೆ. ಜನಪದ ಎಲ್ಲಾ ಸಮಸ್ಯೆಗಳಿಗೂ ದಿಔಷಧವಾಗಿದೆ. ಹಾಗಾಗಿ ಜಾತಿ, ಧರ್ಮವನ್ನು ಮೀರಿರುವ ಇಂತಹ ಜನಪದ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಈ ಸಂದರ್ಭದ ತುರ್ತು ಎಂದರು.

ಜನಪದವು ಒಬ್ಬ ಮನುಷ್ಯನನ್ನು ಶ್ರೇಷ್ಠ ಚಿಂತಕನಾಗಿ, ಸಾಹಿತಿಯಾಗಿ, ಸಮಾಜ ಸುಧಾರಕನಾಗಿ ಮಾಡುತ್ತದೆ. ಹಾಗಾಗಿ ವಿದ್ವತ್ ವಲಯಕ್ಕೆ ಜನಪದ ಅತಿ ಮುಖ್ಯ. ಜನಪದ ಕ್ರಾಂತಿಗೀತೆಗಳಿಗಿಂತ ಮತ್ತೊಂದು ಕ್ರಾಂತಿಗೀತೆಗಳು ಬೇಕಿಲ್ಲ. ಜನಪದರು ತಮ್ಮ ಅನುಭವವನ್ನು ಹಾಡಾಗಿ, ಕಥೆಯಾಗಿ ಕಟ್ಟಿದ್ದಾರೆ ಎಂದು ತಿಳಿಸಿದರು.

ಆದರೆ ಇಂದಿನ ಪೀಳಿಗೆಯವರು ಜನಪದ ಹಾಡುಗಳನ್ನು ತಮ್ಮ ವಿಕೃತಿಗೆ ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಪದವನ್ನು ಮುಂದಿನ ಪೀಳಿಗೆಗೆ ಸರಿಯಾಗಿ ಕೊಂಡೊಯ್ಯುವ ಕೆಲಸವಾಗಬೇಕಿದೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಿ.ಎಸ್.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಎಚ್.ಎಸ್.ನಾಗಭೂಷಣ್, ಹಿರಿಯ ಜನಪದ ವಿದ್ವಾಂಸ ತೀ.ನಾ.ಶಂಕರನಾರಾಯಣ, ಜಾನಪದ ಗಾಯಕ ಕೆ.ಯುವರಾಜ್, ಡಾ.ಶೇಖರ್ ಗೌಳೇರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.