ತಿಪಟೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯಧನ ತಾಂತ್ರಿಕ ತೊಂದರೆಯಿಂದಾಗಿ ರೈತರ ಖಾತೆಗೆ ಜಮೆಯಾಗದೆ ಕೆಲ ರೈತರು ಆತಂಕಗೊಂಡಿದ್ದಾರೆ.

ತಾಲ್ಲೂಕಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ 29,808 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 27,662 ಜನರಿಗೆ ಮಾತ್ರ ಅಧಿಕೃತವಾಗಿ ಹಣ ಮಂಜೂರಾಗುತ್ತಿದೆ. ಉಳಿದ 2,146 ಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಪ್ರಾರಂಭದಲ್ಲಿ ನೋಂದಣಿಯನ್ನು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆದಿತ್ತು.

ಖಾತೆಗೆ ಸಹಾಯಧನ ಬಾರದಿರುವ ಬಗ್ಗೆ ಆನ್ಲೈನ್ ಮೂಲಕ ಇಲಾಖೆಯಲ್ಲಿ ಪರೀಕ್ಷಿಸಿದರೆ ಖಾತೆಯ ನಂಬರ್ ತಪ್ಪಾಗಿ ನಮೂದಾಗಿರುವುದು, ಐಎಫ್ಎಸ್ಸಿ ಕೋಡ್ ತಪ್ಪಾಗಿರುವುದು, ಆಧಾರ್ ಸಂಖ್ಯೆ ಜೋಡಣೆ ಸಮಸ್ಯೆಯಿದೆ. ಈ ಎಲ್ಲ ಸಮಸ್ಯೆಗಳ ತಿದ್ದುಪಡಿಗೆ ತಹಶೀಲ್ದಾರ್ ಅವರಿಗೆ ಅವಕಾಶ ಕಲ್ಪಿಸಿರುವುದಾಗಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಲ್ಲಿವರೆಗೆ ತಹಶೀಲ್ದಾರ್ಗೆ ಈ ಬಗ್ಗೆ ಯಾವುದೇ ಮಾಹಿತಿ ಹಾಗೂ ಸೂಚನೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.