ಪಾವಗಡ: ತಾಲ್ಲೂಕಿನಾದ್ಯಂತ ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಕೆ.ಟಿ.ಹಳ್ಳಿ ಸರ್ಕಾರಿ ಪಿ.ಯು ಕಾಲೇಜು ಉಪನ್ಯಾಸಕ ವೆಂಕಟೇಶುಲು ಅವರ ಫೇಸ್‌ಬುಕ್ ಫ್ರೊಫೈಲ್‌ಗೆ ಹಾಕಿದ್ದ ಫೋಟೊ ಬಳಸಿಕೊಂಡು ಅಪರಿಚಿತನೊಬ್ಬ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಾನೆ

ವೆಂಕಟೇಶುಲು ಅವರ ಫೇಸ್‌ಬುಕ್ ಸ್ನೇಹಿತರಿಗೆ, ‘ತಾನು ಕಷ್ಟದಲ್ಲಿದ್ದೇನೆ ಆಸ್ಪತ್ರೆಯ ಚಿಕಿತ್ಸೆಗೆ ಹಣ ಬೇಕಿದೆ ಫೋನ್ ಪೆ, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ’ ಕಿಡಿಗೇಡಿ ಕೇಳಿಕೊಂಡಿದ್ದಾನೆ.

ಫೋನ್ ಪೆ, ಗೂಗಲ್ ಪೆ ಇಲ್ಲವಾದಲ್ಲಿ ನೆಟ್ ಬ್ಯಾಂಕ್ ಮೂಲಕ ಹಣ ವರ್ಗಾಯಿಸುವಂತೆ ಒಂದು ದಿನದ ನಂತರ ಹಣ ಮರಳಿಸುವುದಾಗಿ ಬೇಡಿಕೆ ಇಟ್ಟಿದ್ದಾನೆ. ಇದರ ಬಗ್ಗೆ ಅನುಮಾನಗೊಂಡು ವೆಂಕಟೇಶುಲು ಅವರಿಗೆ ಸ್ನೇಹಿತರು ವಿಚಾರ ತಿಳಿಸಿದ್ದಾರೆ.

ಕೂಡಲೆ ಎಚ್ಚೆತ್ತ ಉಪನ್ಯಾಸಕ ತಮ್ಮ ನಕಲಿ ಖಾತೆಯಿಂದ ಬರುವ ಸಂದೇಶಗಳಿಗೆ ಯಾರೂ ಸ್ಪಂದಿಸಬಾರದು. ಯಾರೂ ಹಣ ವರ್ಗಾಯಿಸಬಾರದು ಎಂದು ವಾಟ್ಸ್‌ಆ್ಯಪ್, ಫೇಸ್‌ಬುಕ್ ಗ್ರೂಪ್‌ಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದಾರೆ.

‘ಇಂತಹ ಕೃತ್ಯದಿಂದ ಮೋಸ ಮಾಡುವುದರ ಜೊತೆಗೆ ತೇಜೋವಧೆಯೂ ಅಗುತ್ತದೆ. ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗುವುದು. ಯಾರೂ ಕಿಡಿಗೇಡಿಗಳ ಮೋಸದ ಜಾಲಕ್ಕೆ ಬೀಳದೆ ಎಚ್ಚರವಹಿಸಬೇಕು’ ಎಂದು ಉಪನ್ಯಾಸಕ ವೆಂಕಟೇಶುಲು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಅಧಿಕಾರಿಯ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.