ಹುಳಿಯಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸೆಪ್ಟಂಬರ್ ತಿಂಗಳಿನಲ್ಲಿ ಸಂಘಗಳ ಸದಸ್ಯರಿಗೆ ಆರ್ಥಿಕ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಎಲ್.ಬಿ. ಪ್ರೇಮಾನಂದ್ ತಿಳಿಸಿದರು.

ಹೋಬಳಿಯ ದಬ್ಬಗುಂಟೆ ಗ್ರಾಮದಲ್ಲಿ ಧರ್ಮಸ್ಥಳ ಯೋಜನೆಯಿಂದ ಆರ್ಥಿಕ ಮಾಸಾಚರಣೆ ಕಾರ್ಯಕ್ರಮದಡಿ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಯೋಜನೆಯ ಎಲ್ಲಾ ಕಾರ್ಯಕರ್ತರಿಗೆ ನಿಯಮಾವಳಿ ಮತ್ತು ಅನುಷ್ಠಾನ ಕುರಿತು ಅರಿವು ಮೂಡಿಸಲಾಗಿದೆ. ಸ್ವಸಹಾಯ ಸಂಘಗಳ ನಿರ್ವಹಣಾ ಕ್ಷಮತೆ, ಸೇವಾ ಕೇಂದ್ರಗಳ ಕಾರ್ಯಕ್ಷಮತೆ, ಸದಸ್ಯರಿಂದ ಪ್ರಗತಿನಿಧಿ ಮೊತ್ತದ ಸದ್ವಿನಿಯೋಗದ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದರು.

ಗಾಣಧಾಳು ವಲಯ ಮೇಲ್ವಿಚಾರಕಿ ಭಾಗ್ಯಾ, ಒಕ್ಕೂಟಗಳ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ, ದ್ಯಾಮಕ್ಕ, ಸೇವಾ ಪ್ರತಿನಿಧಿ ಸಲ್ಮಾ ಹಾಗೂ ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.