ತುಮಕೂರು: ನಗರದ ಕುಡಿಯುವ ನೀರಿನ ಜಲ ಸಂಗ್ರಹಗಾರ ಬುಗುಡನಹಳ್ಳಿ ಕೆರೆಗೆ ಸೋಮವಾರ ತಡ ರಾತ್ರಿ 12 ಗಂಟೆಗೆ
ಗೊರೂರು ಜಲಾಶಯದಿಂದ ಬಿಟ್ಟಿದ್ದ ಹೇಮಾವತಿ ನೀರು ಬಂದು ತಲುಪಿದೆ.

ಗೊರೂರು ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಟ್ಟಿದ್ದು, ಬಾಗೂರುನವಿಲೆ ಗೇಟ್ ಮೂಲಕ 1,100 ಕ್ಯೂಸೆಕ್ ಹರಿದು ಬರುತ್ತಿದೆ. ನಂತರ ಕಾಲುವೆಯಲ್ಲಿ 400ರಿಂದ 500 ಕ್ಯೂಸೆಕ್ನಷ್ಟು ನೀರು ಹರಿದು ಬಂದು ಬುಗುಡನಹಳ್ಳಿ ಕೆರೆ ಸೇರುತ್ತಿದೆ.

ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ. ಬುಗುಡನಹಳ್ಳಿ ಕೆರೆ ಬರಿದಾಗುವ ಹಂತ ತಲುಪಿದ್ದ ಸಮಯದಲ್ಲಿ ಹೇಮಾವತಿಯಿಂದ ನೀರು ಬಿಟ್ಟಿರುವುದು ನಗರದ ಜನರು ನಿಟ್ಟುಸಿರು ಬಿಡುವಂತಾಗಿದೆ. ಬೇಸಿಗೆಯಲ್ಲಿ ಕೊಳವೆ ಬಾವಿ ಆಶ್ರಯಿಸಿ, ಟ್ಯಾಂಕರ್ ಮೂಲಕ ನೀರು ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕಿತ್ತು. ಸದ್ಯಕ್ಕೆ ನಗರದ ನೀರಿನ ಸಮಸ್ಯೆ ನೀಗಿದಂತಾಗಿದೆ.

ಶಾಸಕರ ತಂಡ ಭೇಟಿ: ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದು ಬರುತ್ತಿದ್ದು ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮೇಯರ್, ಸದಸ್ಯರು ಹಾಗೂ ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.