ಜೆಜೆಎಂ ಯೋಜನೆಯಲ್ಲಿ ಹುಯಿಲ್ ದೊರೆ ಗ್ರಾಮದಲ್ಲಿ ಅಪೂರ್ಣ ಕಾಮಗಾರಿ ಕೈಗೊಳ್ಳಲಾಗಿದೆ. ಕೆಲವೆಡೆ ನಲ್ಲಿಗಳಿಗೆ ಸಂಪರ್ಕ ಸಹ ನೀಡಿಲ್ಲ. ಸಿಮೆಂಟ್ ರಸ್ತೆಗಳನ್ನು ಅಗೆದಿದ್ದು ಅವುಗಳ ದುರಸ್ತಿ ಸಹ ಮಾಡಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.ಹರೀಶ್, ಹುಯಿಲ್‌ದೊರೆ
ನಾದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಜೆಜೆಎಂ ಕಾಮಗಾರಿ ಉದ್ದರಾಮನಹಳ್ಳಿ ಮತ್ತು ಕೆರೆಯಾಗಲಹಳ್ಳಿಗೆ ಮಾತ್ರ ಸೀಮಿತವಾಗಿದೆ. ಪಟ್ಟನಾಯಕನಹಳ್ಳಿಯಲ್ಲಿ ಕಾಮಗಾರಿ ಪ್ರಾರಂಭಕ್ಕೆ ಇನ್ನು ಕಾರ್ಯಾದೇಶ ನೀಡಿಲ್ಲ. ಕೇಳಿದರೆ ತಾಂತ್ರಿಕ ತೊಂದರೆಯ ನೆಪ ಹೇಳುತ್ತಾರೆ. ಅಧಿಕಾರಿಗಳ ವಿಳಂಬ ನೀತಿಯಿಂದ ಸರ್ಕಾರಿ ಯೋಜನೆಗಳು ಹಳ್ಳ ಹಿಡಿಯುವಂತಾಗಿ ಜನತೆಗೆ ಇದರಿಂದ ಲಾಭ ಸಿಗುತ್ತಿಲ್ಲ.ಜಿ.ತುಳಸಮ್ಮ, ಪಟ್ಟನಾಯಕನಹಳ್ಳಿ ಗ್ರಾ.ಪಂ. ಸದಸ್ಯೆ
ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ಪೈಪ್‌ಗಳ ಗುಣಮಟ್ಟ ಪರೀಕ್ಷೆ ಮಾಡಿದ ನಂತರ ಕಾಮಗಾರಿ ಮಾಡಲಾಗುತ್ತಿದೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿ ಕುಟುಂಬಕ್ಕೆ ಸಮಾನವಾಗಿ ಯಾವುದೇ ರೀತಿ ತಾರತಮ್ಯ ಮಾಡದೆ ನೀರು ಕೊಡುವ ಉದ್ದೇಶದಿಂದ ಕಾಮಗಾರಿ ಕೈಗೊಳ್ಳಲಾಗಿದೆ.ಮಂಜು ಪ್ರಸಾದ್, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ಕಳ್ಳಂಬೆಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗಾನಹಳ್ಳಿ ಅಜ್ಜೇನಹಳ್ಳಿ ಮತ್ತು ಲಕ್ಕನಹಳ್ಳಿ ಗ್ರಾಮಗಳಲ್ಲಿ ಮಾತ್ರ ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿದೆ. ಇಲ್ಲಿ ಆರು ತಿಂಗಳಲ್ಲಿ ಮುಗಿಸಬೇಕಾದ ಕಾಮಗಾರಿ ವರ್ಷವಾದರೂ ಮುಗಿದಿಲ್ಲ. ನಲ್ಲಿ ಸಂಪರ್ಕ ನೀಡಿಲ್ಲ ಪೈಪ್‌ಲೈನ್ ಹಾನಿ ಆಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಜೆಜೆಎಂ ಕಾಮಗಾರಿಯಿಂದ ಜನರಿಗೆ ಯಾವುದೇ ಪ್ರಯೋಜನ ದೊರೆಯದಂತಾಗಿದೆ.ಅಭಿಷೇಕ್ ಕಳ್ಳಂಬೆಳ್ಳ, ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.