ತುಮಕೂರು: ಸಾಹಿತಿ ಕಮಲಾ ಹಂಪನಾ ಜಿಲ್ಲಾ ಲೇಖಕಿಯರ ಸಂಘದ ಪ್ರಥಮ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕಿಯರಿಗೆ ಸ್ಫೂರ್ತಿ ತುಂಬಿದ್ದರು. ಹಂಪನಾ ಮತ್ತು ಕಮಲಾ ಹಂಪನಾ ದಂಪತಿಗಳು ಮುದ್ದಣ ಮನೋರಮೆಯರಂತೆ ಮಾದರಿಯಾಗಿದ್ದರು ಎಂದು ಲೇಖಕಿ ಬಾ.ಹ.ರಮಾಕುಮಾರಿ ಹೇಳಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಮಲಾ ಹಂಪನಾ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಜೈನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿ, ಅಮೂಲ್ಯ ಕೃತಿಗಳನ್ನು ರಚನೆ ಮಾಡಿದ್ದಾರೆ. ಕಮಲಾ ಹಂಪನಾ ನೆನಪಿನ ವಿಚಾರ ಸಂಕಿರಣ ಏರ್ಪಡಿಸಿ, ಮತ್ತಷ್ಟು ವಿಷಯಗಳನ್ನು ಸಾಹಿತ್ಯಾಸಕ್ತರು ಮೆಲುಕು ಹಾಕುವಂತೆ ಮಾಡಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ಕಮಲಾ ಹಂಪನಾ ಅವರು ಅಧ್ಯಯನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡಿದ್ದಾರೆ’ ಎಂದು ತಿಳಿಸಿದರು.

ಇತಿಹಾಸಕಾರ ಡಿ.ಎನ್.ಯೋಗೀಶ್ವರಪ್ಪ, ಜೈನ ಸಮಾಜದ ಅಧ್ಯಕ್ಷ ನಾಗರಾಜ್, ಸಾಹಿತ್ಯ ಪರಿಷತ್ತಿನ ಕೆ.ಎಸ್.ಉಮಾಮಹೇಶ್, ಚಿಕ್ಕಬೆಳ್ಳಾವಿ ಶಿವಕುಮಾರ್, ಕೆಂಕೆರೆ ಮಲ್ಲಿಕಾರ್ಜುನ್, ಜಿ.ಎಚ್.ಮಹದೇವಪ್ಪ, ರಾಣಿ ಚಂದ್ರಶೇಖರ್, ನಟರಾಜ್, ಜಲದಿ ರಾಜು, ಚೆಲುವರಾಜು, ಚಾಂದು ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.