ತುರುವೇಕೆರೆ: ’ಜೆಡಿಎಸ್ನಲ್ಲಿ ವೀರಶೈವ ಲಿಂಗಾಯತರಿಗೆ ಕಿಂಚಿತ್ತೂ ಗೌರವ ಸಿಗುವುದಿಲ್ಲ. ಆದ್ದರಿಂದ ಯಾರೂ ಕೂಡ ಜೆಡಿಎಸ್ ಸೇರುವ ಮನಸ್ಸು ಮಾಡಬಾರದು’ ಬಿಜೆಪಿ ಅಭ್ಯರ್ಥಿ ಜಯರಾಮ್ ಎ.ಎಸ್ ಸಮುದಾಯದ ಮುಖಂಡರಿಗೆ ಕಿವಿಮಾತು ಹೇಳಿದರು.

ಪಟ್ಟಣದಲ್ಲಿ ವೀರಶೈವ ಲಿಂಗಾಯತ ಮುಖಂಡ ಸೊಪ್ಪಿನಹಳ್ಳಿ ಶಿವಬಸಪ್ಪ ಬಿಜೆಪಿಗೆ ನೀಡಿದ ₹10 ಸಾವಿರ ರೂಪಾಯಿ ಠೇವಣಿ ಹಣ ಸ್ವೀಕರಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ವೀರಶೈವ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಮುದಾಯ ಹಿಂಬಾಲಿಸುತ್ತಿದ್ದು ಈ ಬಾರಿ ಗೆಲುವಿಗೆ ಲಿಂಗಾಯತರ ಪಾತ್ರ ಬಹಳ ಮುಖ್ಯ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಲ್ಕರೆ ಮೃತ್ಯುಂಜಯ, ಮಾಜಿ ಅಧ್ಯಕ್ಷ ದುಂಡ ರೇಣುಕಯ್ಯ, ಮುಖಂಡರಾದ ಕಲ್ಲಪ್ಪ, ಕೊಂಡಜ್ಜಿ ವಿಶ್ವನಾಥ್, ಕುಮಾರಸ್ವಾಮಿ, ಟಿ.ಕೆ.ಪ್ರಭಾಕರ್, ಮಂಜುನಾಥ್, ಸೇರಿದಂತೆ ಹಲವಾರು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.