ಶಿರಾ ತಾಲ್ಲೂಕಿನ ಕದರೇಕಂಬದಹಳ್ಳಿಯಲ್ಲಿ ಮಾರುಕಟ್ಟೆಗೆ ಹೂವು ತರುವಂತೆ ಸಹಾಯಕ ನಿರ್ದೇಶಕ ಆರ್.ನಾಗರಾಜು ಹೂವು ಬೆಳೆಗಾರರನ್ನು ಮನವೊಲಿಸಿದರು
ಕೇಂದ್ರದ ವೈಶಿಷ್ಟ್ಯ
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಈ ಮಾರುಕಟ್ಟೆಯ ನೆಲ ಅಂತಸ್ತಿನಲ್ಲಿ 15 ಮಳಿಗೆ ಹರಾಜು ಪ್ರಾಂಗಣ ಶೀತಲ ಗೃಹ ಸಭಾಂಗಣ ವಿಶ್ರಾಂತಿ ಕೊಠಡಿ ಪುರುಷರಿಗೆ ಎರಡು ಮತ್ತು ಮಹಿಳೆಯರಿಗೆ ನಾಲ್ಕು ಶೌಚಾಲಯ ನಾಲ್ಕು ಕೊಠಡಿ ಎರಡು ಭದ್ರತಾ ಕೊಠಡಿಗಳಿವೆ.
ಆರ್.ನಾಗರಾಜು
ಬೆಳೆಗಾರರ ಮನವೊಲಿಕೆ
ವಹಿವಾಟು ಇಲ್ಲದೆ ಸ್ಥಗಿತವಾಗಿದ್ದ ಮಾರುಕಟ್ಟೆಗೆ ಹೊಸ ರೂಪ ನೀಡಲು ಇಲಾಖೆ ಸಂಪೂರ್ಣ ಸಹಕಾರ ನೀಡಿದೆ. ಹೂವು ಬೆಳೆಯುವ ಗ್ರಾಮಗಳಿಗೆ ತೆರಳಿ ಅವರ ಮನವೊಲಿಸಿ ಅವರಿಗೆ ಎಲ್ಲ ರೀತಿಯ ಸೌಕರ್ಯ ನೀಡಿ ಮಾರುಕಟ್ಟೆಗೆ ಕರೆತರುವ ಕೆಲಸ ಮಾಡಲಾಗಿದೆ. ಇದರಿಂದ ಈಗ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂವು ಬರುತ್ತಿದೆ. ಇದರ ಜೊತೆಗೆ ಮಲ್ಲೇ ಕಾಕಡ ಕನಕಾಂಬರ ಮಾರುಕಟ್ಟೆಗೆ ಬಂದರೆ ಅನುಕೂಲವಾಗುವುದು. ಶಿರಾದಲ್ಲಿ ನಡೆಯುವ ಹೂವಿನ ಮಾರುಕಟ್ಟೆ ನಿಲ್ಲಿಸಿದರೆ ಇಲ್ಲಿನ ಮಾರುಕಟ್ಟೆ ಹೆಚ್ಚು ಗಮನ ಸೆಳೆಯುವುದು. ಆರ್.ನಾಗರಾಜು ಸಹಾಯಕ ನಿರ್ದೇಶಕ ಪುಷ್ಪ ಹರಾಜು ಮಾರುಕಟ್ಟೆ ಚಿಕ್ಕನಹಳ್ಳಿ
ರಮೇಶ್ ಬಾಬು
ಇನ್ನಷ್ಟು ಜಾಗೃತಿ ಬೇಕು
ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸೌಕರ್ಯ ನೀಡಿದ್ದರೂ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಬಡವನಹಳ್ಳಿಯಲ್ಲಿ ಯಾವುದೇ ಸೌಕರ್ಯ ಇಲ್ಲದಿದ್ದರೂ ಅಲ್ಲಿಗೆ ಹೆಚ್ಚಿನ ರೈತರು ಹೂವು ತೆಗೆದುಕೊಂಡು ಹೋಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರು ಸಹ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ರಮೇಶ್ ಬಾಬು ಬಾಲಬಸವನಹಳ್ಳಿ
ಮಂಜುನಾಥ್
ಉತ್ತಮ ಬೆಲೆಯ ಖಚಿತತೆ ಅಗತ್ಯ
ಕೆಲವು ವರ್ಷಗಳ ಹಿಂದೆ ಶೂನ್ಯ ವಹಿವಾಟು ನಡೆಯುತ್ತಿದ್ದ ಪುಷ್ಪ ಹರಾಜು ಮಾರುಕಟ್ಟೆ ಈಗ ಒಂದು ಹಂತಕ್ಕೆ ಬಂದಿದ್ದು ಉತ್ತಮ ಹಾದಿ ಹಿಡಿದಿದೆ. ಪ್ರಸ್ತುತ ಶಿರಾದಲ್ಲಿ ಅಸಂಘಟಿತವಾಗಿ ನಡೆಯುವ ಹೂವಿನ ಮಾರುಕಟ್ಟೆಯನ್ನು ಸ್ಥಗಿತ ಮಾಡಿದರೆ ಹೂವು ಬೆಳೆಯುವ ರೈತರು ಪುಷ್ಪ ಹರಾಜು ಮಾರುಕಟ್ಟೆಗೆ ಬರುವುದಕ್ಕೆ ಪ್ರಾರಂಭಿಸುತ್ತಾರೆ. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಉತ್ತಮ ಬೆಲೆ ಸಿಗುವುದನ್ನು ಖಚಿತ ಪಡಿಸಿದರೆ ಅನುಕೂಲವಾಗುವುದು.
ಮಂಜುನಾಥ್ ಅಮಲಗೊಂದಿ