ಶಿರಾ: ಬಯಲು ಸೀಮೆ ರೈತರು ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದು, ಈಗ ಉತ್ತಮವಾಗಿ ಮಳೆಯಾಗುತ್ತಿದ್ದು ಒಂದು ಕಡೆ ಸಂತಸ ಮೂಡಿಸುತ್ತಿದ್ದರೆ ಮತ್ತೊಂದೆಡೆ ಕಣ್ಣು ಮುಂದೆ ಬೆಳೆ ನಷ್ಟವಾಗುತ್ತಿರುವುದು ರೈತರ ಸಂಕಷ್ಟ ಹೆಚ್ಚಿಸಿದೆ.

ತಾಲ್ಲೂಕಿನ ಹೆಂದೊರೆ ಗ್ರಾಮದ ರೈತ ಮುದ್ದಪ್ಪ, ಯಶೋದಮ್ಮ ದಂಪತಿ ಭೂಮಿಯನ್ನೇ ನಂಬಿ ಎರಡು ಎಕರೆ ಭೂಮಿಯಲ್ಲಿ ₹ 2ಲಕ್ಷ ಖರ್ಚು ಮಾಡಿ ಈರುಳ್ಳಿ ಬೀಜ ಬಿತ್ತನೆ ಮಾಡಿದ್ದರು.

ಈರುಳ್ಳಿ ಫಸಲು ಉತ್ತಮವಾಗಿ ಬಂದಿತ್ತು. ಈರುಳ್ಳಿ ಕಿತ್ತುಹಾಕಿ ಬಳ್ಳಿ ಕತ್ತರಿಸುವ ವೇಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಕಾಲಿಕವಾಗಿ ನಿರಂತರವಾಗಿ ಸುರಿದ ಮಳೆಗೆ ಸಿಲುಕಿ ಕಿತ್ತು ಹಾಕಿದ್ದ ಈರುಳ್ಳಿ ಮಳೆಯಲ್ಲಿ ನೆನೆದು ಮೊಳಕೆ ಒಡೆದಿದೆ. ಸಾಲು, ಸಾಲಾಗಿ ಕಿತ್ತುಹಾಕಿದ್ದ ಈರುಳ್ಳಿ ಗೆಡ್ಡಗಳಲ್ಲಿ ಮೊಳಕೆ ಒಡೆದಿರುವುದು ರೈತ ದಂಪತಿಯ ನೋವು ಹೆಚ್ಚಿಸಿದೆ.

ಈರುಳ್ಳಿ ಕಟಾವು ಮಾಡಿ ಮಾರಾಟ ಮಾಡಿದ್ದರೆ ಅಂದಾಜು ₹4 ಲಕ್ಷ ಸಿಗುತ್ತಿತ್ತು. ಆದರೆ ಮಳೆಯಿಂದಾಗಿ ನಷ್ಟವಾಗಿದೆ. ಈರುಳ್ಳಿ ಜೊತೆಗೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ ಮತ್ತು ಹತ್ತಿ ಸಹ ಮಳೆಗೆ ಸಿಲುಕಿ ಬೆಳೆ ನಷ್ಟವಾಗಿದೆ.

ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಳೆಗೆ ಸಿಲುಕಿ ಬೆಳೆ ಹಾನಿ ಉಂಟಾಗಿರುವ ರೈತರ ನೆರವಿಗೆ ಮುಂದಾಗಲು ಬೆಳೆ ನಷ್ಟ ಪರಿಶೀಲಿಸಿ, ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.