ಜನರಿಗೆ ರಕ್ಷಣೆ ನೀಡುವ ಪೊಲೀಸರಿಗೆ ನಿರ್ಭಯವಾಗಿ ವಾಸಿಸಲು ವಸತಿಗೃಹ ನಿರ್ಮಿಸಬೇಕು. ಹಲವು ವರ್ಷ ಕಳೆದರೂ ಸರ್ಕಾರ ಗೃಹಗಳನ್ನು ನಿರ್ಮಿಸದ ಕಾರಣ ಇಲ್ಲಿಗೆ ವರ್ಗವಾಗಿ ಬರುವ ಪೊಲೀಸರು ಬಾಡಿಗೆ ಮನೆಗೆ ಹುಡುಕಾಡುತ್ತಾರೆ.
-ಮೆಡಿಕಲ್ ಚನ್ನಬಸವಯ್ಯ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ
ಸದಾ ಒತ್ತಡದಲ್ಲಿ ಕರ್ತವ್ಯನಿರ್ವಹಿಸುವ ಪೊಲೀಸರಿಗೆ ಸೂರಿನ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇತ್ತೀಚೆಗೆ ಒತ್ತಡದಲ್ಲಿ ಕೆಲಸ ನಿರ್ವಹಿಸಲು ಆಗದೆ ಹೃದಯ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಅವರನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ.
-ಕೆಂಕೆರೆ ಸತೀಶ್, ರಾಜ್ಯ ರೈತಸಂಘದ ಸಂಚಾಲಕ
ಪತ್ರಿಕೆ ಹಾಕಲು ದಿನವೂ ಪೊಲೀಸರ ವಸತಿ ಗೃಹಗಳಿಗೆ ತೆರಳುತ್ತೇನೆ. ಅಲ್ಲಿಗೆ ಹೋಗುವ ದಾರಿಯೇ ಉತ್ತಮವಾಗಿಲ್ಲ. ಮನೆಗಳ ಮುಂದೆ ಗಿಡಗಳು ಬೆಳೆದು ಅಲ್ಲಿಗೆ ಹೋಗುವುದು ದುಸ್ತರವಾಗಿದೆ.
-ಡಿ.ಯೋಗೀಶ್ ಪತ್ರಿಕಾ ಪ್ರತಿನಿಧಿ ಹುಳಿಯಾರು
ತಳಮಟ್ಟದಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಹುಳಿಯಾರಿನ ಪೊಲೀಸ್ ವಸತಿ ಗೃಹಗಳನ್ನು ನೋಡಿದರೆ ಸರ್ಕಾರದ ನೀತಿಗಳು ಕಡತದಲ್ಲಿ ಮಾತ್ರ ಎಂಬುದು ಅರ್ಥವಾಗುತ್ತದೆ.
-ಎಚ್.ಎನ್.ರಾಘವೇಂದ್ರ ಅಧ್ಯಕ್ಷ ಜಯಕರ್ನಾಟಕ ಜನಪರ ವೇದಿಕೆಯ ಹುಳಿಯಾರು ಘಟಕ
ಈಗಾಗಲೇ ಎರಡು ಕಟ್ಟಡಗಳ ನೆಲಸಮಕ್ಕೆ ಆದೇಶ ನೀಡಲಾಗಿದೆ. ಉಳಿದ ಕಟ್ಟಡದ ದುರಸ್ತಿ ಸೇರಿದಂತೆ ಹೊಸದಾಗಿ ವಸತಿ ಗೃಹ ನಿರ್ಮಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ.
-ವಿನಾಯಕ ಶೆಟ್ಟಿಗೇರಿ ಡಿವೈಎಸ್‌ಪಿ
ಹುಳಿಯಾರಿನ ಪೊಲೀಸ್ ವಸತಿ ಗೃಹಗಳ ಹಿಂಭಾಗದ ನೋಟ
ಪೊಲೀಸ್ ವಸತಿ ಗೃಹದ ಮುಂಭಾಗ ಹಿಂದಿಗಳು ಓಡಾಡಿ ರಾಡಿ ಮಾಡಿದ ಸ್ಥಳದಲ್ಲಿ ಮಕ್ಕಳು ಆಟವಾಡುತ್ತಿರುವುದು