ತುಮಕೂರು: ಕುಲಾಂತರಿ ಬೀಜ ಕಾಯ್ದೆ ವಿರೋಧಿಸಿ, ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

‘ಬಹುರಾಷ್ಟ್ರೀಯ ಕಂಪನಿಗಳು ಕುಲಾಂತರಿ ತಳಿ ಕಾಯ್ದೆ ಜಾರಿಗೆ ಒತ್ತಾಯಿಸುತ್ತಿವೆ. ದೇಶಿಯ ತಳಿ ನಾಶಗೊಳಿಸಿ, ಜೀವ ವೈವಿಧ್ಯತೆ ಹಾಳುಮಾಡುವ ಹುನ್ನಾರಕ್ಕೆ ಕೈ ಹಾಕಿವೆ. ಕೃಷಿ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸುತ್ತಿವೆ. ಕೇಂದ್ರ ಸರ್ಕಾರ ಕುಲಾಂತರಿ ತಳಿ ನೀತಿ ರೂಪಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಪರಿಸರವಾದಿ ಸಿ.ಯತಿರಾಜು ಆಗ್ರಹಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ, ‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪೂರ್ಣಗೊಂಡರೆ ಜಿಲ್ಲೆಯ 6 ತಾಲ್ಲೂಕುಗಳ ರೈತರು ನೀರಿನಿಂದ ವಂಚಿತರಾಗುತ್ತಾರೆ. ಸರ್ಕಾರ ಹಠಮಾರಿತನ ಬಿಟ್ಟು ರೈತರ ಹಿತ ಕಾಪಾಡಬೇಕು. ಕಾಮಗಾರಿ ಮುಂದುವರಿಸಿದರೆ ಬೃಹತ್ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ರವೀಶ್, ಮುಖಂಡರಾದ ತಿಮ್ಮೇಗೌಡ, ಮೋಹನ್ಕುಮಾರ್, ಕೃಷ್ಣಪ್ಪ, ಮಹೇಶ್, ಡಿ.ಕೆ.ರಾಜು, ನರಸಪ್ಪ, ನಾಗರಾಜು, ರಾಮಚಂದ್ರಪ್ಪ, ಸುರೇಶ್, ಶ್ರೀನಿವಾಸ್, ನಾರಾಯಣಪ್ಪ, ಪುಟ್ಟಸ್ವಾಮಿ, ಗಂಗಾಧರಯ್ಯ ಇತರರು ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು

* ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು

* ದಾರಿ, ಕೆರೆ, ರಾಜ ಕಾಲುವೆ ಒತ್ತುವರಿ ತೆರವು ಮಾಡಿಸಬೇಕು

* ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು

* ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಪೂರೈಕೆ

* ಬ್ಯಾಂಕ್ಗಳು ಸಾಲ ಮರು ಪಾವತಿಗೆ ಒತ್ತಡ ಹೇರಬಾರದು

* ಬೆಳೆ ಕೈ ಸೇರುವ ತನಕ ಅವಕಾಶ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.