ತುಮಕೂರು: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಸಾವಿತ್ರಿ ಬಾಯಿ ಫುಲೆ ಅವರ 190ನೇ ಜನ್ಮದಿನಾಚರಣೆಯನ್ನು ನಗರದ ಹೊರಪೇಟೆಯ ಸಂಪಾದನೆ ಮಠ ಪ್ರದೇಶದದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾನವ ಮಂಟಪದ ಡಾ.ಅರುಂಧತಿ, ‘18ನೇ ಶತಮಾನದಲ್ಲಿ ತಳಸಮುದಾಯಗಳಿಗೆ ಮತ್ತು ಎಲ್ಲ ಜಾತಿಯ ಹೆಣ್ಣು ಮಕ್ಕಳಿಗೆ ಶಾಲೆ ತೆರೆದು ಶಿಕ್ಷಣ ನೀಡಿದ ತಾಯಿ ಸಾವಿತ್ರಿ ಬಾಯಿ ಫುಲೆ’ ಎಂದರು.

ವಂಚಿತ ಸಮುದಾಯಗಳಿಗೆ ಶಿಕ್ಷಣದ ಅರಿವು ಮತ್ತು ಕಾನೂನು ಜ್ಞಾನವನ್ನು ಹೋರಾಟದ ಮೂಲಕ ಕೊಟ್ಟವರು ಹಾಗೂ ನಮಗಾಗಿ ಕಷ್ಟಗಳನ್ನು ಮೆಟ್ಟಿನಿಂತ ಸಮಾಜ ಸುಧಾರಕರ ವಿಚಾರಗಳನ್ನು ತಿಳಿಯುವುದಕ್ಕೆ ಶಿಕ್ಷಣ ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ, ಸಂವಿಧಾನವು ಮಹಿಳೆಯರಿಗೆ, ವಂಚಿತ ಸಮುದಾಯಗಳಿಗೆ ಹಾಗೂ ಧ್ವನಿ ಇಲ್ಲದವರಿಗೆ ಹಕ್ಕುಗಳನ್ನು ನೀಡಿತು. ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಖಾತ್ರಿಗೊಳಿಸಿತು ಎಂದರು.

ಸಾವಿತ್ರಿ ಬಾಯಿ ಫುಲೆ ಮತ್ತು ಜ್ಯೋತಿ ಬಾ ಫುಲೆ ದಂಪತಿ ಸತ್ಯಶೋಧಕ ಸಮಾಜದ ಮೂಲಕ ಜಾತಿ ಪದ್ಧತಿ, ಗುಲಾಮಿ ಪದ್ಧತಿ ಮತ್ತು ಗೊಡ್ಡು ಸಂಪ್ರದಾಯಗಳ ವಿರುದ್ಧ ಜನರನ್ನು ಜಾಗೃತಿಗೊಳಿಸಿದರು ಎಂದು ಸ್ಮರಿಸಿದರು.

ಕೊಳೆಗೇರಿ ಸಮಿತಿಯ ಪದಾಧಿಕಾರಿಗಳಾದ ಗೌರಮ್ಮ, ಮಹಾದೇವಮ್ಮ, ಸುನಂದಮ್ಮ, ಸುಧಾ, ಶಂಕರಯ್ಯ, ಸಿದ್ದರಾಜು, ರಂಗನಾಥ್, ಹಯತ್ಸಾಬ್, ಚಕ್ರಪಾಣಿ, ಕೆಂಪಣ್ಣ, ಸುಬ್ಬ, ದೀಪು ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.