ತುಮಕೂರು: ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ಇರುವ ರಾಮದೇವರ ಬೆಟ್ಟದ ಮೇಲಿನ ಹೊಂಡದಲ್ಲಿ ವಿದ್ಯಾರ್ಥಿ ಶವ ಭಾನುವಾರ ಪತ್ತೆಯಾಗಿದೆ.

ಸಿದ್ಧಗಂಗಾ ಮಠದಲ್ಲಿರುವ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಗಗನ್ಗೌಡ (16) ಮೃತಪಟ್ಟಿರುವ ಬಾಲಕ. ನೆಲಮಂಗಲ ತಾಲ್ಲೂಕು ಹೆಸರುಘಟ್ಟ ಸಮೀಪದ ಕಾಕೋಳ ಗ್ರಾಮದ ಪ್ರಕಾಶ್ ಎಂಬುವರ ಪುತ್ರನಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಮಠದಲ್ಲೇ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ.

ಜುಲೈ 16ರಿಂದ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಕ್ಯಾತ್ಸಂದ್ರ ಠಾಣೆಗೆ ತಂದೆ ಪ್ರಕಾಶ್ ಶನಿವಾರ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ್ದರೂ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಭಾನುವಾರ ಬೆಳಿಗ್ಗೆ ಗ್ರಾಮದ ಕೆಲವರು ನೀರಿನ ಹೊಂಡದಲ್ಲಿ ಶವ ಇರುವುದನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರು ಹಾಗೂ ಪೋಷಕರು ಶವ ಗುರುತಿಸಿದ್ದಾರೆ.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಅವಕಾಶಕ್ಕೇ ಕತ್ತರಿ!

ಅನುಮಾನ: ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎಂಬ ಅನುಮಾನ ಮೃತ ಬಾಲಕನ ಪೋಷಕರನ್ನು ಕಾಡುತ್ತಿದೆ. ಸಾವಿನ ಕಾರಣ ಪತ್ತೆ ಮಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.