ಶಿರಾ: ನಗರದಲ್ಲಿ ನಿರ್ಮಿಸಿರುವ 1,008 ಮನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿತರಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

10 ವರ್ಷಗಳಿಂದ ಮನೆ ಮತ್ತು ನಿವೇಶನ ಮಂಜೂರಾದರೂ ಹಲವು ಕಾರಣಗಳಿಂದ ವಿತರಣೆ ಸಾಧ್ಯವಾಗಿರಲಿಲ್ಲ. ಅವುಗಳನ್ನು ಶೀಘ್ರವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರದಲ್ಲಿ 1,008 ಮನೆಗಳು ನಿರ್ಮಾಣವಾಗುತ್ತಿದ್ದು, ಪ್ರತಿ ಮನೆಯನ್ನು ₹5.16 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿದ್ದು ಫಲಾನುಭವಿಗಳು ₹1 ಲಕ್ಷ ಭರಿಸಬೇಕಿದೆ. ಪರಿಶಿಷ್ಟ ಜಾತಿಯವರಿಗೆ 302, ಪರಿಶಿಷ್ಟ ಪಂಗಡ– 101, ಒಬಿಸಿ– 152, ಅಲ್ಪಸಂಖ್ಯಾತರು– 353 ಹಾಗೂ ಇತರರಿಗೆ 100 ಮನೆಗಳನ್ನು ನಿಗದಿ ಮಾಡಲಾಗಿದೆ ಎಂದರು.

ಮನೆಗಳಿಗಾಗಿ ಈಗಾಗಲೇ ಕೆಲವರು ₹10 ಸಾವಿರ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕೆಲವು ಮನೆಗಳು ಉಳಿದಿದ್ದು ಅವಶ್ಯಕತೆ ಇರುವವರು ₹1 ಲಕ್ಷದೊಂದಿಗೆ ನಗರಸಭೆ ಅಥವಾ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಕಾರ್ಮಿಕರಿಗೆ ನಿವೇಶನ ವಿತರಣೆ: ಕಲ್ಲುಕೋಟೆಯಲ್ಲಿ ನಗರಸಭೆಯಲ್ಲಿ ಕೆಲಸ ಮಾಡುವ 142 ಕಾರ್ಮಿಕರಿಗೆ ನಿವೇಶನ ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಹಿಂದೆ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ ವಿತರಿಸಿದ್ದ 60 ನಿವೇಶನಗಳ ಫಲಾನುಭವಿಗಳಿಗೆ ಪರ್ಯಾಯವಾಗಿ ಬೇರೆ ಕಡೆ ನಿವೇಶನ ನೀಡಲು ತೀರ್ಮಾನಿಸಲಾಗಿದೆ ಎಂದರು.

ಕೇಂದ್ರ ಸರ್ಕಾರದಿಂದ 2008 ರಲ್ಲಿ 682 ಮನೆ ಮಂಜೂರಾಗಿದ್ದು, ಫಲಾನುಭವಿಗಳಿಗೆ ಇದುವರೆಗೂ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಭವಾನಿ ನಗರದಲ್ಲಿ ಹಕ್ಕುಪತ್ರ ನೀಡಲಾಗುವುದು. ಜ್ಯೋತಿನಗರ, ನಾಗಜ್ಜಿಗುಡಿಸಲು, ಗುಡದಹಟ್ಟಿ, ಶಿವಾಜಿನಗರ ಹಾಗೂ ಗಾಡಿವನ್ ಮೊಹಲ್ಲಾಗಳಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿಯಿಂದ 450 ಮನೆಗಳು ಮಂಜೂರಾಗಿದ್ದು ಅವುಗಳಲ್ಲಿ 439 ಮನೆಗಳು ಪೂರ್ಣಗೊಂಡಿವೆ. ಅವುಗಳ ಹಕ್ಕುಪತ್ರ ಸಹ ವಿತರಣೆ ಮಾಡಲಾಗುವುದು ಎಂದರು.

ಬೀಡಿ ಕಾಲೊನಿಯಲ್ಲಿ 279 ಮನೆ ಮಂಜೂರಾಗಿದ್ದು, ಅದರಲ್ಲಿ 211 ಪೂರ್ಣಗೊಂಡಿದ್ದು ಫಲಾನುಭವಿಗಳು ₹50 ಸಾವಿರ ಭರಿಸಿದರೆ ಹಕ್ಕುಪತ್ರ ಜೊತೆಗೆ ಇ– ಖಾತೆ ಮಾಡಿಕೊಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮಹಮೂದ್, ಪೌರಾಯುಕ್ತ ರುದ್ರೇಶ್, ಮಧುಗಿರಿ ಉಪವಿಭಾಗಾಧಿಕಾರಿ ಶಿವಪ್ಪ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರು, ಆಶ್ರಯ ಸಮಿತಿ ಸದಸ್ಯರಾದ ರಮೇಶ್, ನೂರುದ್ದೀನ್, ಮಂಜುನಾಥ್, ಜಯಲಕ್ಷ್ಮಿ, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಜರಿದ್ದರು.

ಇ- ಖಾತೆ ವಿತರಣೆ

ನಗರದಲ್ಲಿ ಪಾರದರ್ಶಕತೆ ಕಾಪಾಡಲು ಆಸ್ತಿಯನ್ನು ಇ- ಖಾತೆ ಮಾಡಲಾಗುತ್ತಿದೆ. ಪ್ರತಿ ಮನೆ ಬಳಿ ಬಂದು ಖಾತೆ ಮಾಡಿಕೊಡಲಾಗುವುದು. ಇ- ಖಾತೆ ಮಾಡುವುದಕ್ಕೆ ಹಲವರಿಂದ ವಿರೋಧ ವ್ಯಕ್ತವಾಯಿತು. ಪೌರಾಯುಕ್ತರ ಮೇಲೆ ಆರೋಪಗಳನ್ನು ಮಾಡಿದರು. ಎಲ್ಲರ ವಿರೋಧದ ನಡುವೆಯೂ ಜನರಿಗೆ ಅನ್ಯಾಯವಾಗದಂತೆ ಇ– ಖಾತೆ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೋಂದಣಾಧಿಕಾರಿ ಕಚೇರಿಯಲ್ಲಿ ಇ– ಖಾತೆ ಇದ್ದರೆ ಮಾತ್ರ ಆಸ್ತಿ ನೋಂದಣಿ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.