ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್) ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.ಎರಡೂ ಸಂಘಟನೆಗಳ ಮುಖಂಡರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಿ.ಪರಶಿವಮೂರ್ತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಎಐಎಸ್ಎಫ್: ಏಪ್ರಿಲ್ 23ರಿಂದ ಪರೀಕ್ಷೆ ಪ್ರಾರಂಭವಾಗಲಿವೆ. ಆದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಸಮಯಾವಕಾಶ ಕಡಿಮೆ ಇದೆ. ಇದರಿಂದ ತುಂಬಾ ಅನನುಕೂಲವಾಗುತ್ತಿದೆ. ಹೀಗಾಗಿ ವಿಧಾನ ಸಭಾ ಚುನಾವಣೆ ಮುಗಿದ ಬಳಿಕ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಅವರಿಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.ಸಂಘಟನೆ ಜಿಲ್ಲಾ ಸಂಚಾಲಕ ಚಂದ್ರಶೇಖರ್, ಎ.ಮಿಥುನ್, ಆರ್.ಕಿರಣ್, ಎಂ.ಆರ್.ದರ್ಶನ್, ಅಶ್ವತ್ಥ್, ತಿಪ್ಪೇಸ್ವಾಮಿ, ಶ್ರೀನಿವಾಸ್, ಪುಟ್ಟರಾಜು, ಯಶವಂತ್, ರೋಹಿತ್, ವಿ.ಕುಸುಮ, ಸಿ.ಎಂ.ಶ್ರೀರಕ್ಷಾ, ಎಸ್.ಲೀಲಾವತಿ, ಟಿ.ಕೆ.ಪ್ರಿಯಾಂಕ, ಎನ್.ಎಸ್.ಪೂಜಾ, ಸಂದೀಪ್, ಬಿ ನಂದೀಶ್, ನಂದನರಾಜ್, ಅಶೋಕ್ ಇದ್ದರು.

ಎಬಿವಿಪಿ ಸಂಘಟನೆ: ಚುನಾವಣೆಗೂ ಮುನ್ನವೇ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವುದುರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಇನ್ನಷ್ಟು ಸಮಯಾವಕಾಶ ಕೊಡಬೇಕು. ಹೀಗಾಗಿ, ಪರೀಕ್ಷೆ ಮುಂದೂಡಬೇಕು ಎಂದು ಮನವಿ ಎಬಿವಿಪಿ ಸಂಘಟನೆ ಕಾರ್ಯಕರ್ತರು ಮನವಿ ಮಾಡಿದರು.ಎಬಿವಿಪಿ ಮುಖಂಡರಾದ ಚಂದನ್, ಅಪ್ಪು ಪಾಟೀಲ್, ತ್ರಿನೇತ್ರ, ದರ್ಶನ್, ಜಗದೀಶ್ ಹಾಗೂ ಪದವಿ ವಿದ್ಯಾರ್ಥಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.