ಸಾಸ್ತಾನ (ಬ್ರಹ್ಮಾವರ): ಹೈನುಗಾರಿಕೆ ಬಗ್ಗೆ ಕೀಳರಿಮೆ ಪಡಬಾರದು. ಹೈನುಗಾರಿಕೆಯಲ್ಲಿ ಹೆಚ್ಚು ಹೆಚ್ಚು ಯುವಕರು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಮಂಗಳೂರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಹೇಳಿದರು.

ಸಾಸ್ತಾನ ಗೋಳಿಗರಡಿ ದೈವಸ್ಥಾನದ ವಠಾರದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸಾಸ್ತಾನ ವ್ಯವಸಾಯ ಸೇವಾ ಸಹಕಾರಿ ಸಂಘ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ಸಾಸ್ತಾನ ಹಾಲು ಉತ್ಪಾದಕರ ಸಹಕಾರಿ ಸಂಘ, ಪಾಂಡೇಶ್ವರ, ಹೈನುಬೆಟ್ಟು, ಚೇಂಪಿ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ನಡೆದ ಮಿಶ್ರ ತಳಿ ಕರು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಹೈನುಗಾರಿಕೆ ಹಾಲು ಉತ್ಪಾದನೆಗೆ ಮಾತ್ರ ಸೀಮಿತವಾಗಿರದೆ, ಸಮಾಜಕ್ಕೆ, ಪರಿಸರಕ್ಕೆ ಪೂರಕ ಅಂಶಗಳು ಲಭಿಸುತ್ತವೆ. ಆರೋಗ್ಯಯುತ ಜೀವನ, ಕೃಷಿ ಪೂರಕ ವಾತಾವರಣ ಸಿಗುತ್ತದೆ ಎನ್ನುವುದನ್ನು ಮನಗಾಣಬೇಕು. ಪ್ರತಿ ಮನೆಯಲ್ಲಿ ಕರುಗಳನ್ನು ಬೆಳೆಸಿ ಅದರ ಸಮರ್ಪಕ ಆರೈಕೆಯಲ್ಲಿ ತೊಡಗಬೇಕು ಎಂದ ಅವರು, ಕರುಗಳ ಪ್ರದರ್ಶನದಿಂದ ಹೈನುಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪಾಂಡೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಎಂ.ಸಿ. ರೆಡ್ಡಪ್ಪ, ಸಾಸ್ತಾನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಗದೀಶ ಕಾರಂತ, ಹಾಲು ಉತ್ಪಾದಕರ ಸಂಘದ ಪಾಂಡೇಶ್ವರ ಹೈನಬೆಟ್ಟು ಅಧ್ಯಕ್ಷೆ ವಿಶಾಲಾಕ್ಷಿ ಎ.ಪಿ.ರಾವ್, ಚೇಂಪಿಯ ಅಧ್ಯಕ್ಷ ಆಸ್ತಿಕ್ ಶಾಸ್ತ್ರಿ, ಪಾಂಡೇಶ್ವರದ ಅಧ್ಯಕ್ಷೆ ಶಾಂತಾ ಭಟ್, ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ ಪೂಜಾರಿ, ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಸುರೇಶ ಅಡಿಗ, ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ಜಿ. ವಿಠ್ಠಲ್ ಪೂಜಾರಿ, ದೈವಸ್ಥಾನ ಪಾತ್ರಿ ಶಂಕರ ಪೂಜಾರಿ, ಪಶು ಸಂಗೋಪನಾ ಇಲಾಖೆ ನಿವೃತ್ತ ಉಪ ನಿರ್ದೇಶಕ ಸರ್ವೋತ್ತಮ ಉಡುಪ, ರೋಟರಿ ಕ್ಲಬ್ ಕಾರ್ಯದರ್ಶಿ ಸುಲತಾ ಹೆಗ್ಡೆ ಇದ್ದರು.

ಪಶು ವೈದ್ಯಕೀಯ ಇಲಾಖೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂತೆಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯ ವೈದಾಧಿಕಾರಿ ಡಾ.ಮಂಜುನಾಥ ಅಡಿಗ ವಂದಿಸಿದರು. ಸಾಹೇಬರಕಟ್ಟೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರದೀಪ ಕುಮಾರ್ ನಿರೂಪಿಸಿದರು. ಸಾಸ್ತಾನ ಪಶು ವೈದ್ಯಕೀಯ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಸೂರಜ್ ಕುಮಾರ್ ಸಹಕರಿಸಿದರು. ಉತ್ತಮ ತಳಿಗಳಿಗೆ ಬಹುಮಾನ ನೀಡಲಾಯಿತು. ಜೆರ್ಸಿ ತಳಿಯಲ್ಲಿ ಜ್ಞಾನೇಶ್ವರ ಉಡುಪ ಪ್ರಥಮ, ಎಚ್.ಎಫ್. ತಳಿಯಲ್ಲಿ ಲೀಲಾ ಹೈನಬೆಟ್ಟು ಪ್ರಥಮ ಬಹುಮಾನ ಪಡೆದರು. ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.