ಉಡುಪಿ: ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಬುಧವಾರ 2022–23ನೇ ಸಾಲಿನ ನಗರಸಭೆ ಬಜೆಟ್ ಮಂಡಿಸಿದ್ದಾರೆ. ₹ 155.28 ಕೋಟಿ ಆದಾಯ ಹಾಗೂ ₹ 152.23 ಕೋಟಿ ವೆಚ್ಚ ಸೇರಿ ₹ 3.4 ಕೋಟಿ ಮಿಗತೆ ಬಜೆಟ್ ಮಂಡಿಸಿದ್ದಾರೆ.

ಯಾವುದಕ್ಕೆ ಎಷ್ಟು ಅನುದಾನ:ನಗರಸಭೆ ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ ₹ 17.1 ಕೋಟಿ, ರಸ್ತೆ, ಚರಂಡಿ, ಕಾಲುದಾರಿ ದುರಸ್ತಿ, ನಿರ್ವಹಣೆಗೆ ₹ 42.3 ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ ₹ 23.80 ಕೋಟಿ ನಿಗದಿಪಡಿಸಲಾಗಿದೆ.

ದಾರಿದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ ₹ 4.8 ಕೋಟಿ, ದಾರಿ ದೀಪಗಳ ಅಳವಡಿಕೆಗೆ ₹ 95.56 ಲಕ್ಷ, ನೀರು ಸರಬರಾಜು ಪೈಪ್ ದುರಸ್ತಿ ನಿರ್ವಹಣೆಗೆ ₹ 9.2 ಕೋಟಿ, ಹೊಸ ಪೈಪ್‌ಲೈನ್‌ಗೆ ₹ 7.68 ಕೋಟಿ, ನೈರ್ಮಲ್ಯ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ₹ 24.7 ಕೋಟಿ ಅನುದಾನ ಮೀಸಲಿಡಲಾಗಿದೆ.

ಒಳಚರಂಡಿ ಯೋಜನೆಗಳಿಗೆ ಹಾಗೂ ಎಸ್‌ಟಿಪಿ ನಿರ್ವಹಣೆಗೆ, ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ₹ 8.25 ಕೋಟಿ, ಉದ್ಯಾನಗಳ ದುರಸ್ತಿ, ನಿರ್ವಹಣೆಗೆ ₹ 80 ಲಕ್ಷ ಹೊಸ ಉದ್ಯಾನಕ್ಕೆ ₹ 81.86 ಲಕ್ಷ, ಸ್ಮಶಾನಗಳ ಅಭಿವೃದ್ಧಿಗೆ 1.62 ಕೋಟಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಶ್ರೇಯೋಭಿವೃದ್ಧಿಗೆ 1.37 ಕೋಟಿ ನಿಗದಿಪಡಿಸಲಾಗಿದೆ.

ಇತರೆ ಬಡ ಜನರ ಕಲ್ಯಾಣಕ್ಕೆ ₹ 36.97 ಲಕ್ಷ, ಅಂಗವಿಕಲರ ಕಲ್ಯಾಣ ನಿಧಿಯಾಗಿ ₹ 25.50 ಲಕ್ಷ ನಿಧಿ ಮೀಸಲಿರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು.

2022–23ನೇ ಸಾಲಿನ ಆಯವ್ಯಯಕ್ಕೆ ಹಲವು ಮೂಲಗಳಿಂದ ಆದಾಯ ನಿರೀಕ್ಷಿಸಲಾಗಿದೆ. 15ನೇ ಕೇಂದ್ರ ಹಣಕಾಸು ಆಯೋಗದ ಅನುದಾನ ₹5.14 ಕೋಟಿ, ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ ₹2.11 ಕೋಟಿ, ಸಿಬ್ಬಂದಿ ವೇತನ ಅನುದಾನ ₹5.72 ಕೋಟಿ, ವಿದ್ಯುತ್ ಬಿಲ್ ಅನುದಾನ ₹7.3 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನ ₹6.30 ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ ₹3.3 ಕೋಟಿ, ಗೃಹಭಾಗ್ಯ ಯೋಜನೆ ಅನುದಾನ ₹15 ಲಕ್ಷ ಪಾರಂಪರಿಕ ತ್ಯಾಜ್ಯ ನಿರ್ವಹಣೆಯ ಅನುದಾನ 3 ಕೋಟಿ ನಿರೀಕ್ಷಿಸಲಾಗಿದೆ ಎಂದರು.

ಆಸ್ತಿ ತೆರಿಗೆಯಿಂದ ₹13.50 ಕೋಟಿ, ವ್ಯಾಪಾರ ಪರವಾನಗಿ, ಜಾಹೀರಾತು ಶುಲ್ಕ ₹1.8 ಕೋಟಿ, ಕಟ್ಟಡ ಪರವಾನಗಿ ಶುಲ್ಕ ₹35 ಲಕ್ಷ, ನೀರು ಸರಬರಾಜು ಶುಲ್ಕದಿಂದ ₹9.50 ಕೋಟಿ ಆದಾಯ, ನಗರಸಭೆಯ ವಾಣಿಜ್ಯ ಮಳಿಗೆಗಳು ಸಂಕೀರ್ಣಗಳಿಂದ ₹1.75 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಸಂಸತ್ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರ ಅನುದಾನ ₹10 ಲಕ್ಷ ಅದಿಭಾರ ಶುಲ್ಕ ₹25 ಲಕ್ಷವನ್ನು ಅಂದಾಜಿಸಲಾಗಿದೆ. ಇದರ ಜತೆಗೆ, ನಗರದ ಸಮಗ್ರ ಅಭಿವೃದ್ಧಿಗೆ ಶಾಸಕರ ಶಿಫಾರಸ್ಸಿನಂತೆ ಕೆಲವು ಇಲಾಖೆಗಳಿಂದಲೂ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.

ಲೋಕೋಪಯೋಗಿ ಇಲಾಖೆಯಿಂದ ₹16 ಕೋಟಿ ಕಾಮಗಾರಿ ನಗರಸಭೆ ವ್ಯಾಪ್ತಿಗೆ ಮಂಜೂರಾಗಿದೆ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ₹39 ಲಕ್ಷ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೆರೆಗಳ ಅಭಿವೃದ್ಧಿಗೆ ₹6 ಕೋಟಿ ಮಂಜೂರಾಗಿದೆ.

ಎಸ್‌ಸಿ,ಎಸ್‌ಟಿ ಕಾಲೋನಿಗಳ ರಸ್ತೆ ಅಭಿವೃದ್ಧಿಗೆ ₹2.30 ಕೋಟಿ, ಸಮಗ್ರ ಗಿರಿಜನ ಉಪ ಯೋಜನೆಯಡಿ ₹64 ಲಕ್ಷ, ಮಾಸ್ಟರ್ ಪ್ಲಾನ್ ಯೋಜನೆಯಡಿ ಮಠದ ಬೆಟ್ಟು ಬಳಿ ಇಂದ್ರಾಳಿ ಹೊಳೆಗೆ ₹1 ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು, ನಿಟ್ಟೂರು, ಪುತ್ತೂರು, ಇಂದ್ರಾಳಿ, ಬನ್ನಂಜೆ ತೋಡು ಕಾಮಗಾರಿಗೆ ₹95 ಲಕ್ಷ, 76 ಬಡಗಬೆಟ್ಟು ಗ್ರಾಮದಲ್ಲಿ ಇಂದ್ರಾಣಿ ಹೊಳೆಗೆ 1 ಕೋಟಿ, ಸೆಟ್ಟಿಬೆಟ್ಟು ವಾರ್ಡಿನಲ್ಲಿ ₹78 ಲಕ್ಷ ರಾಮಾನುಜಾಚಾರ್ಯ ಮಾರ್ಗದ ಇಂದ್ರಾಣಿ ಹೊಳೆಗೆ ಸೇರುವ ದೊಡ್ಡ ತೋಡಿಗೆ ₹70 ಲಕ್ಷ, ಕಲ್ಮಾಡಿ ವಾರ್ಡ್‌ನ ಬಗ್ಗು ಪಂಜುರ್ಲಿ ದೇವಸ್ಥಾನದ ಬಳಿ ಹಾಗೂ ಬಡ್ತಲ ಆದಂ ಸಾಹೇಬರ ಮನೆಯ ಬಳಿ₹ 86 ಲಕ್ಷದಲ್ಲಿ ತೋಡು, ಕೆಳ ಪರ್ಕಳ ತೋಡಿಗೆ ಗರಡಿ ಬಳಿ ₹ 50 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದು ತಿಳಿಸಿದರು.

ಮುಂಗಡ ಪತ್ರಕ್ಕೆ ಸದಸ್ಯರು ಸರ್ವಾನುಮತದಿಂದ ಅನುಮೋದನೆ ನೀಡಿದರು. ನಗರದ ತ್ಯಾಜ್ಯ ನಿರ್ವಹಣೆಯಲ್ಲಿ ನಗರಸಭೆ ಜತೆ ಕೈಜೋಡಿಸಿದ್ದ ಸಾಹಸ್ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ಪೌರಾಯುಕ್ತ ಉದಯ್ ಶೆಟ್ಟಿ, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಇದ್ದರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಮನೆಯ ಹಂತದಲ್ಲಿಯೇ ಹಸಿ ಕಸ ಬಳಕೆಗೆ ಉತ್ತೇಜನ, ಪ್ಲಾಸ್ಟಿಕ್ ಬಳಕೆ ಜಾಗೃತಿ ಮೂಡಿಸಲು ಕೈಚೀಲಗಳ ವಿತರಣೆ, ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತ, ಪ್ರಯಾಣಿಕರ ತಂಗುದಾಣ, ಮಲ್ಪೆ, ಉಡುಪಿ, ಮಣಿಪಾಲ ಭಾಗಗಳಲ್ಲಿ ಸಾರ್ವಜನಿಕ ಹಾಗೂ ಡಿಬಿಎಂಎಫ್ ಮಾದರಿಯಲ್ಲಿ ಉಡುಪಿ ಅರ್ಬನ್ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಜಾರಿ, ಸಂಚಾರಕ್ಕೆ ಅಡ್ಡಿಯಾಗುವ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವಿಗೆ ಉದ್ದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.